HEALTH TIPS

ಬಜಕೂಡ್ಲು ಶ್ರೀ ಧೂಮಾವತೀ ದೈವಸ್ಥಾನ ಮಹಾದ್ವಾರ ಲೋಕಾರ್ಪಣೆ

                   ಪೆರ್ಲ: ದೇವಸ್ಥಾನ-ದೈವಸ್ಥಾನದ ಮಹಾದ್ವಾರಗಳು ಪಾವಿತ್ರ್ಯದ ಸಂಕೇತ ಹಾಗೂ ಮನದ ಕಲ್ಮಷ ತೊಡೆದುಹಾಕುವ ಹಾದಿಯಾಗಿದೆ ಎಂಬುದಾಗಿ ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ. 

               ಅವರು ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನಿಹದ ಶ್ರೀ ಧೂಮಾವತೀ ಹಾಗೂ ಪರಿವಾರ ದೈವಸ್ಥಾನದ ಎದುರು ನಿರ್ಮಿಸಲಾದ ನೂತನ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದರು. ರಾಮ, ಕೃಷ್ಣರು ನಮಗೆ ಆದರ್ಶಪ್ರಾಯರಾಗಿದ್ದು, ರಾಮಾಯಣದಂತಹ ಪುರಾಣ ಕತೆಗಳ ಬಗ್ಗೆ ಮಕ್ಕಳಿಗೆ ಬೋಧನೆ ನೀಡಬೇಕು ಎಂದು ತಿಳಿಸಿದರು. 

           ನೂತನ ಮಹಾದ್ವಾರವನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಲೋಕಾರ್ಪಣೆಗೈದು ಆಶೀರ್ವಚನ ನೀಡಿ, ಆರಾಧನೆಯಲ್ಲಿ ಎಂದಿಗೂ ಆಡಂಬರ ಸಲ್ಲದು. ದೇವಾಲಯಗಳ ಪಾವಿತ್ರ್ಯತೆ ಉಳಿಸಿ, ಮೌಲ್ಯಾಧಾರಿತ ಶ್ರದ್ಧೆ-ಭಕ್ತಿಯಿಂದ ಮುನ್ನಡೆಯಬೇಕು ಎಂದು ತಿಳಿಸಿದರು. ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನ ಸಮಿತಿ ಅಧಕ್ಷ ರಾಮಕೃಷ್ಣ ಭಟ್ ಸರ್ಪಂಗಳ ಅಧ್ಯಕ್ಷತೆ ವಹಿಸಿದ್ದರು.   ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್, ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಮುನ್ನಾಡ್ ವಡಕ್ಕೇಕರ ಶ್ರೀ ಭಗವತೀ ದೇವಸ್ಥಾನ ಸಮಿತಿ ಅಧ್ಯಕ್ಷ ಕುಞÂಕೃಷ್ಣನ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು. ಈ ಸಂದರ್ಭ 

              ಶ್ರೀ ಧೂಮಾವತೀ ಮತ್ತು ಪರಿವಾರ ದೈವಗಳ ದೈವಸ್ಥಾನ ಸಮಿತಿ ವತಿಯಿಂದ ಆಯೋಜಿಸಲಾದ ರಾಮಾಯಣ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದೈವಚಾಕರಿದಾರರು, ಮಹಾದ್ವಾರ ನಿರ್ಮಾಣಕಾರ್ಯದಲ್ಲಿ ಸಹಕರಿಸಿದವರನ್ನು ಅಭಿನಂದಿಸಲಾಯಿತು. ದಾಮೋದರ ಬಜಕೂಡ್ಲು ಸವಾಗತಿಸಿದರು. ಉದಯ ಕುಮಾರ್ ಸ್ವರ್ಗ ಕಾರ್ಯಕ್ರಮ ನಿರೂಪಿಸಿದರು. ಸುಜಿತ್ ರಐ ಬಜಕೂಡ್ಲು ವಂದಿಸಿದರು.

            ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ನಿರ್ದೇಶನದಲ್ಲಿ ವಾಂತಿಚ್ಚಾಲ್ ಕುಂಟಾಲುಮೂಲೆ ಚಿರಂಜೀವಿ ಮಹಿಳಾ ಯಕ್ಷಕುಣಿತ ಭಜನಾ ಸಂಘದಿಂದ ಯಕ್ಷ ಕುಣಿತ ಭಜನೆ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries