ಮುಳ್ಳೇರಿಯ: ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಆತಿಥ್ಯದಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ವಾರ್ಷಿಕ ಜಿಲ್ಲಾ ಕ್ರೀಡೊತ್ಸವವು ಇತ್ತೀಚೆಗೆ ಕುಂಟಾರು ಎಯುಪಿ ಶಾಲೆಯಲ್ಲಿ ಮುಕ್ತಾಯವಾಯಿತು.
ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಸಮಿತಿ ಹಾಗೂ ವಿವಿಧ ವಲಯ ಸಮಿತಿಯ ಮುಖಂಡರು ಹಾಗೂ ಸದಸ್ಯರು ಭಾಗವಹಿಸಿದ್ದರು. ಇದುವರೆಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ಏತಡ್ಕ ವಲಯ ಶಿವಳ್ಳಿ ಬ್ರಾಹ್ಮಣ ಸಭಾವು 101 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕಾಸರಗೋಡು ವಲಯ ಶಿವಳ್ಳಿ ಬ್ರಾಹ್ಮಣ ಸಭಾವು 97 ಅಂಕ, ಮಂಜೇಶ್ವರ ವಲಯ ಶಿವಳ್ಳಿ ಬ್ರಾಹ್ಮಣ ಸಭಾವು 96 ಅಂಕ, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾವು 92 ಅಂಕ ಹಾಗೂ ಕಾಂಞಂಗಾಡು ವಲಯ ಶಿವಳ್ಳಿ ಬ್ರಾಹ್ಮಣ ಸಭಾವು 58 ಗಳಿಸಿದೆ. ಸಂಘಟನೆಯ ಕಾಸರಗೋಡು ಜಿಲ್ಲಾ ಸಾಂಸ್ಕøತಿಕೋತ್ಸವವು ಇದೇ ಡಿ. 23 ಹಾಗೂ 24ರಂದು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮತ್ತು ಗಣೇಶ ಮಂದಿರದಲ್ಲಿ ಜರುಗಲಿದೆ. ಸ್ಪರ್ಧಾ ವಿಜೇತರಿಗೆ ಸಂಘಟನೆಯು ಅಭಿನಂದನೆ ಸಲ್ಲಿಸಿದೆ.