ಕಾಸರಗೋಡು: ನಗರದ ಶ್ರೀ ರಾಮ ಪೇಟೆಯ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ 113ನೇ ವರ್ಷದ ವೈಭವದ ಸಂಕೀರ್ತನಾ ಸಪ್ತಾಹ ಅದ್ದೂರಿಯಾಗಿ ಆರಂಭಗೊಂಡಿತು.
ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಮಹಾ ಆರತಿಯೊಂದಿಗೆ ಸಪ್ತಾಹ ದೀಪವನ್ನು ಕ್ಷೇತ್ರದ ಪ್ರಧಾನ ಅರ್ಚಕ ಕೆ.ವೇದವ್ಯಾಸ ಭಟ್ ಪ್ರಜ್ವಲಿಸಿದರು. ಈ ಸಂದರ್ಭ ಕೀರ್ತನಾಕಾರರಿಂದ ಭಜನೆ ಆರಂಭಗೊಂಡಿತು. ಶ್ರೀ ವಿಠಲ ರಕುಮಾಯಿ ದೇವರು ಹಾಗೂ ದೀಪವನ್ನು ಹೊತ್ತು ಕ್ಷೇತ್ರ ಪ್ರದಕ್ಷಿಣಿಯೊಂದಿಗೆ ರಂಗ ಶಿಲೆಯಲ್ಲಿ ದೀಪ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಇಲ್ಲಿ ಪೂಜೆ ಜರುಗಿದ ಬಳಿಕ ಸರದಿಯಂತೆ ವಿವಿಧ ಭಜನಾ ಮಂಡಳಿಯಿಂದ ಭಜನೆ ಮುಂದುವರಿಯಿತು. ಡಿ.24ರ ವರೆಗೆ ಇಲ್ಲಿ ನಿರಂತರ ಭಜನೆ ನಡೆಯಲಿದೆ. ಡಿ.23 ರಂದು ಗೀತಾ ಜಯಂತಿ ಕಾರ್ಯಕ್ರಮ ನಡೆಯಲಿರುವುದು.