ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿನಿಂದ ಅಗತ್ಯ ಔಷಧ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಅಧೀಕ್ಷಕರೊಂದಿಗೆ ಚರ್ಚಿಸಿದ ಬಳಿಕ ಅಧೀಕ್ಷಕರ ಕಚೇರಿ ದೂರು ಇತ್ಯರ್ಥಪಡಿಸದೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರನ್ನು ಬಲವಂತವಾಗಿ ಠಾಣೆಗೆ ಕರೆದೊಯ್ದರು. ಯುವ ಕಾಂಗ್ರೆಸ್ ಕಾಸರಗೋಡು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬಿದ್ ಎಡಚೇರಿ, ಶ್ರೀನಾಥ್ ಬದಿಯಡ್ಕ, ಮನಾಫ್ ಮಧೂರು, ಶಾಹಿದ್ ಪುಲಿಕುಂಜೆ, ಅನ್ಸಾರಿ ಕೊಟ್ಟಕುಂಜೆ, ದಿಲೀಪ್ ಪುಲಿಕುಂಜೆ, ಶಫೀಕ್ ನೆಲ್ಲಿಕಟ್ಟ, ರಿಯಾಝ್ ಕಾಟ್ಕುಕೊಚ್ಚಿ, ಮುನಾಸ್ ಕುನ್ನಿಲ್, ಸಾಜಿದ್ ಕುಂಡಿಲ್, ಸಯಾಫ್ ತೆರುವತ್, ಉದಯನ್ ಬದಿಯಡ್ಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.