HEALTH TIPS

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಚಯ್ಯೋಮ್-ಕಾಞರಪೊಯಿಲ್ ರಸ್ತೆ ಕಾಮಗಾರಿಗೆ ಚಾಲನೆ

  

              ಕಾಸರಗೋಡು: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಭಾಗವಾಗಿ, ಚಯ್ಯೋಂ-ಕಾಞರಪೊಯಿಲ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದ ರಾಜಮೋಹನ್ ಉಣ್ಣಿತ್ತಾನ್ ಚಾಲನೆ ನೀಡಿದರು.  ಚಾಯೋಂ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪಿಎಂಜಿಎಸ್‍ವೈ ಮೂರನೇ ಹಂತದಲ್ಲಿ ಸೇರ್ಪಡೆಗೊಂಡಿರುವ ಮಡಿಕೈ-ಕಿನಾನೂರ್‍ಕರಿಂದಲಂ ಗ್ರಾಮ ಪಂಚಾಯಿತಿಯ ಚಯ್ಯೋಮ್-ಕಾಞರಪೊಯಿಲ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

               ಪಿ.ಐ.ಯು, ಪಿಎಂಜಿಎಸ್ ವೈ (ಕಾಸರಗೋಡು) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ. ಮಿತ್ರ ವರದಿ ಮಂಡಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಅಬ್ದುಲ್ ರಹಮಾನ್, ಕಿನಾನೂರು-ಕರಿಂದಲಂ ಗ್ರಾಮ ಪಂಚಾಯಿತಿ ಸದಸ್ಯೆ ಶೈಜಮ್ಮ ಬೆಣ್ಣಿ, ಪಂಚಾಯಿತಿ ಸದಸ್ಯೆ ಪಿ.ಧನ್ಯ, ಮಡಿಕೈ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಸತ್ಯ, ಎನ್. ಖಾದರ್ ಉಪಸ್ಥಿತರಿದ್ದರು. ಕಿನಾನೂರು-ಕರಿಂದಲಂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸಂಘಟನಾ ಸಮಿತಿ ಸಂಚಾಲಕ ಟಿ. ಕೆ ರವಿ ಸ್ವಾಗತಿಸಿದರು.  ಮಡಿಕೈ ಗ್ರಾ.ಪಂ.ಉಪಾಧ್ಯಕ್ಷ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ವಿ.ಪ್ರಕಾಶನ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries