HEALTH TIPS

ಅಮೆರಿಕದಲ್ಲಿ ಹಿಂದೂ ದೇವಾಲಯ ವಿರೂಪ: ಸಚಿವ ಎಸ್‌. ಜೈಶಂಕರ್‌ ಖಂಡನೆ

                ಹಮದಾಬಾದ್‌: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿನ ಹಿಂದೂ ದೇವಾಲಯವನ್ನು ವಿರೂಪಗೊಳಿಸಿರುವ ಪ್ರಕರಣ ಕುರಿತು 'ಉಗ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ವಿದೇಶಗಳಲ್ಲಿ ಇಷ್ಟು ಸ್ವಾತಂತ್ರ್ಯ ದೊರಕಬಾರದು' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

              ಇಲ್ಲಿನ ರಾಷ್ಟ್ರಿಯ ರಕ್ಷಾ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ಅವರು ಶನಿವಾರ ಭಾಗವಹಿಸಿದ್ದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ದೇವಾಲಯವನ್ನು ವಿರೂಪಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

               'ದೇಗುಲ ಧ್ವಂಸ ಪ್ರಕರಣದ ಕುರಿತ ಸುದ್ದಿ ನೋಡಿದೆ. ಇಂಥ ಘಟನೆ ನಡೆದಿರುವುದು ವಿಷಾದಕರ' ಎಂದರು.

                 ಕ್ಯಾಲಿಫೋರ್ನಿಯಾದ ನೀವಾರ್ಕ್‌ನಲ್ಲಿಯ ಪ್ರಮುಖ ಹಿಂದೂ ದೇವಾಲಯ ಶ್ರೀ ಸ್ವಾಮಿನಾರಾಯಣ ಮಂದಿರದಲ್ಲಿ ಈ ಕೃತ್ಯ ನಡೆದಿದೆ. ಅದರ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಕೆತ್ತಲಾಗಿದೆ.

              ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಇದು ದ್ವೇಷಾಪರಾದ ಪ್ರಕರಣ ಇರಬಹುದೆಂದು ವಾರ್ಕ್‌ ನಗರ ಪೊಲೀಸರು ಶಂಕಿಸಿದ್ದಾರೆ. ಈ ಕೃತ್ಯವನ್ನು ಖಂಡಿಸಿರುವ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿಯ ಭಾರತೀಯ ಕಾನ್ಸುಲೇಟ್‌, ಈ ಕುರಿತು ಅಮೆರಿಕ ಆಡಳಿತಕ್ಕೆ ದೂರು ನೀಡಿದೆ.

               ಈ ಪ್ರಕರಣಕ್ಕೆ ಸಂಬಂಧಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೇವಸ್ಥಾನದ ಎದುರಿರುವ ನಾಮಫಲಕದ ಮೇಲೆ 'ಖಾಲಿಸ್ತಾನ' ಎಂದು ಪೇಯಿಂಟ್‌ ಬಳಸಿ ಬರೆದಿರುವುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries