ಕಾಸರಗೋಡು: ಕೇರಳ ವಿಧಾನಸಭಾ ಹಿಂದುಳಿದ ಸಮುದಾಯ ಕಲ್ಯಾಣ ಸಮಿತಿ ವತಿಯಿಂದ ದೂರು ಸ್ವೀಕಾರ ಕಾಯ್ಕ್ರಮ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಸಮಿತಿ ಅಧ್ಯಕ್ಷ, ಶಾಸಕ ಪಿ.ಎಸ್.ಸುಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪರಿಗಣನೆಯಲ್ಲಿ ಜಿಲ್ಲೆಯಿಂದ ಸ್ವೀಕೃತವಾದ ಅರ್ಜಿಗಳ ಮೇಲೆ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಸಾಕ್ಷ್ಯ ತೆಗೆದುಕೊಳ್ಳಲಾಯಿತು.
ಮಲಬಾರ್‍ನಲ್ಲಿ ಧಾರ್ಮಿಕ ಪರಿಚಾರಕರು ಮತ್ತು ಕೋಲಧಾರಿಗಳಿಗೆ 800 ರಿಂದ 3000 ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಅಖಿಲ ಕೇರಳ ಯಾದವ ಸಭೆ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ 2020ರಲ್ಲಿ 800ರೂ. ಇದ್ದ ಮೊತ್ತವನ್ನು 1400 ರೂ.ಗೆ ಹೆಚ್ಚಿಸಲಾಗಿದೆ. ಸಮಿತಿಯು ಮತ್ತೆ ಕಾಲೋಚಿತ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅದನ್ನು 2000 ರೂ.ಗೆ ಹೆಚ್ಚಿಸುವ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಅಧ್ಯಕ್ಷ ಪಿ.ಎಸ್ ಸುಪಾಲ್ ತಿಳಿಸಿದರು. ಮಲಬಾರ್‍ನಲ್ಲಿರುವ ತೀಯಾ ಸಮುದಾಯವನ್ನು ಓಬಿಸಿ ಹಾಗೂ ಎಸ್‍ಸಿಬಿಸಿ ಲಿಸ್ಟ್ನಲ್ಲಿ ಸಏರ್ಪಡೆಗೊಳಿಸಲಾಗಿದೆ. ಈ ಸಮುದಾಯಕ್ಕೆ ಪ್ರತ್ಯೇಕ ಕ್ರಮಸಂಖ್ಯೆ ನೀಡುವುದರ ಜತೆಗೆ ವಿಶೇಷ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ತೀಯಾ ಕ್ಷೇಮ ಸಭೆ ಸಲ್ಲಿಸಿದ್ದ ದೂರನ್ನು ಆಯೋಗ ಪರಿಗಣಿಸಿದೆ.
ದೇವಸ್ಥಾನ ಸಮಿತಿಗಳು ವಿಶ್ವಕರ್ಮರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ವಿಶ್ವಕರ್ಮ ಫೆಡರೇಷನ್ ಸೇರಿದಂತೆ ವಿವಿಧ ಸಮುದಾಯ ಸಲ್ಲಿಸಿರುವ ದೂರು ಚರ್ಚೆಗೆ ಸ್ವೀಕರಿಸಲಾಯಿತು. ಸದಸ್ಯರಾದ ಅರುವಿಕ್ಕರ ಶಾಸಕ ಜಿ.ಸ್ಟೀಫನ್ ಮತ್ತು ತಿರೂರು ಶಾಸಕ ಕುರುಕೋಳಿ ಮೊಯ್ದೀನ್ ಸಾಕ್ಷಿ ಸಂಗ್ರಹಣೆಯಲ್ಲಿ ಪಾಲ್ಗೊಂಡರು, ಎಡಿಎಂ ಕೆ.ನವೀನ್ ಬಾಬು ಸ್ವಾಗತಿಸಿದರು. ವಿಧಾನಸಭಾ ಕಾರ್ಯದರ್ಶಿ ಎನ್.ಜಿ.ದೀಪಾ ವಂದಿಸಿದರು. ಹಿಂದುಳಿದ ವರ್ಗಗಳ ಆಯೋಗದ ಸಹಾಯಕ ನೋಂದಣಾಧಿಕಾರಿ ದೇವಸ್ವಂ ಇಲಾಖೆ ವಿಭಾಗಾಧಿಕಾರಿ ಕಿರ್ತಾಡ್ಸ್ ಸಂಶೋಧನಾ ಅಧಿಕಾರಿ, ಸಚಿವಾಲಯದ ಸಿಬ್ಬಂದಿ, ವಿವಿಧ ಇಲಾಖೆ ಸಿಬ್ಬಂದಿ, ಅರ್ಜಿದಾರರು ಪಾಲ್ಗೊಂಡಿದ್ದರು.