ಕಾಸರಗೋಡು: ವಿಶ್ವ ಏಡ್ಸ್ ವಿರುದ್ಧ ದಿನಾಚರಣೆಯ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಎಆರ್‍ಟಿ ಸೆಂಟರ್ ವತಿಯಿಂದ 'ಸಮಾಜ ಮುನ್ನಡೆಯಲಿ' ಎಂಬ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಜನಜಾಗೃತಿ ಸಭೆ, ಆಸ್ಪತ್ರೆ ಸಿಬ್ಬಂದಿಗೆ ಜಾಗೃತಿ ತರಗತಿ, ಪೆÇೀಸ್ಟರ್ ಪ್ರದರ್ಶನ, ಫ್ಲಾಶ್ ಮಾಬ್, ಕರಪತ್ರ ವಿತರಣೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮವನ್ನು ನಗರಸಭಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಉದ್ಘಾಟಿಸಿದರು. ಜಿಲ್ಲಾ ಆಸ್ಪತ್ರೆ ಮಾಜಿ ಅಧೀಕ್ಷಕ ಕೆ.ವಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಎ.ಆರ್.ಟಿ. ಕೇಂದ್ರದ ನೋಡಲ್ ಅಧಿಕಾರಿ ಡಾ. ಜನಾರ್ದನ ನಾಯ್ಕ್ ಮುಖ್ಯ ಭಾಷಣ ಮಾಡಿದರು, ಐಎಂಎ ಕಾಸರಗೋಡು ಘಟಕ ಅಧ್ಯಕ್ಷ ಡಾ. ಜಿತೇಂದ್ರ ರೈ, ಟಿಬಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾರಾಯಣ ಪ್ರದೀಪ್, ನಸಿರ್ಂಗ್ ಸೂಪರಿಂಟೆಂಡೆಂಟ್ ಮಿನಿ ಜೋಸೆಫ್, ಎಲ್.ಎಚ್.ಐ ಜಲಜಾ, ಸಿ.ಎಸ್. ಸಿ ನಿರ್ದೇಶಕ ಕುಞÂಕೃಷ್ಣನ್ ಉಪಸ್ಥಿತರಿದ್ದರು.
ನಗರಸಭಾ ಸದಸ್ಯೆ ಪ್ರಮೀಳಾ ಕುಮಾರಿ ಪ್ರಮಾಣ ವಚನ ಬೋಧಿಸಿದರು. ಕೌನ್ಸಿಲರ್ ಅನಿಲ್ ಕುಮಾರ್ ತರಗತಿ ನಡೆಸಿಕೊಟ್ಟರು. ಎ.ಆರ್.ಟಿ. ಕೇಂದ್ರದ ಫಾರ್ಮಾಸಿಸ್ಟ್ ಸಿಎ ಯೂಸುಫ್ ಸ್ವಾಗತಿಸಿದರು. ಐಸಿಟಿಸಿ ಲ್ಯಾಬ್ ಟೆಕ್ನಿಷಿಯನ್ ನಯನಾ ವಂದಿಸಿದರು.
ಮಲಿಕ್ ದಿನಾರ್ ಕಾಲೇಜ್ ಆಫ್ ನಸಿರ್ಂಗ್ ವಿದ್ಯಾರ್ಥಿಗಳಿಂದ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಫ್ಲಾಶ್ ಮಾಬ್ ನಡೆಸಿಕೊಟ್ಟರು. ಜೆ.ಪಿ.ಎಚ್. ಎನ್ ನಸಿರ್ಂಗ್ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು. ಸ್ಟಾಫ್ ನರ್ಸ್ ಪ್ರಬಿತಾ ಬಾಲನ್, ಡಾಟಾ ಮ್ಯಾನೇಜರ್ ಪಿ.ಕೆ.ಸಿಂಧು, ಲ್ಯಾಬ್ ಟೆಕ್ನಿಷಿಯನ್ ಆಯೇಷತ್ ಶಿನಾರ, ಕಮ್ಯುನಿಟಿ ಕೇರ್ ಸಂಯೋಜಕಿ ಕೆ.ನಿಶಾ ಎನ್ನಿಲ್ ನೇತೃತ್ವ ವಹಿಸಿದ್ದರು.