ಕುಂಬಳೆ: : ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದೇವಸ್ಥಾನದಲ್ಲಿ ಕಾರ್ತಿಕಮಾಸದ ವಿಶೇಷ ಕಾರ್ತಿಕ ಪೂಜೆಯ ಸಲುವಾಗಿ ಇತ್ತೀಚೆಗೆ ಮೀಯಪದವು ಶ್ರೀ ಗುರುನರಸಿಂಹ ಯಕ್ಷಬಳಗದವರಿಂದ ‘ರಾವಣ ವಧೆ’ ಯಕ್ಷಗಾನ ತಾಳಮದ್ದಳೆ ಪ್ರಸ್ತುತಿಗೊಂಡಿತು.
ಹಿಮ್ಮೇಳದಲ್ಲಿ ಭಾಗವತರು ರಾಮಪ್ರಸಾದ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ಸ್ಕಂದ ಮಯ್ಯ ವರ್ಕಾಡಿ ಭಾಗವಹಿಸಿದ್ದು, ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು(ಶ್ರೀರಾಮ), ಗುರುರಾಜ ಹೊಳ್ಳ ಬಾಯಾರು(ರಾವಣ), ಯೋಗೀಶ ರಾವ್ ಚಿಗುರುಪಾದೆ(ಮಂಡೋದರಿ), ವೇ.ಮೂ. ಗಣೇಶ ನಾವಡ ಮೀಯಪದವು(ಮಾತಲಿ) ಪಾತ್ರಗಳನ್ನು ನಿರ್ವಹಿಒಸಿದರು.