ಬದಿಯಡ್ಕ: ಕಾರಡ್ಕದಲ್ಲಿ ನಡೆದ ಕಂದಾಯ ಜಿಲ್ಲಾ ಮಟ್ಟದ ಹೈಯರ್ ಸೆಕೆಂಡರಿ ವಿಭಾಗದ ಮೃದಂಗ ಸ್ಪರ್ಧೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯೆರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿಜಾನ ವಿಭಾಗ ವಿದ್ಯಾರ್ಥಿ ವಿಶ್ವಾಸ್ ಪಿ. ಎಗ್ರೇಡ್‍ನೊಂದಿಗೆ ಪ್ರಥಮ ಸ್ಥಾನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಅಧ್ಯಾಪಕ ದಂಪತಿಗಳಾದ ಪದ್ಯಾಣ ಚಂದ್ರಶೇಖರ್ ಭಟ್ ಹಾಗೂ ಸುಶೀಲಾ ಪದ್ಯಾಣ ಇವರ ಪುತ್ರ. ವಿದ್ವಾನ್ ಯೋಗೀಶ್ ಶರ್ಮಾ ಬಳ್ಳಪದವು ಅವರ ಮೃದಂಗ ವಿದ್ಯಾರ್ಥಿಯಾಗಿದ್ದಾನೆ.