ಕಾಸರಗೋಡು: ಒಂಬತ್ತು ಮತ್ತು ಹತ್ತನೇ ತರಗತಿವಿದ್ಯಾರ್ಥಿಗಳಿಗಾಗಿ ಸೆಂಟ್ರಲ್ ಪ್ರೀಮೆಟ್ರಿಕ್ ಸ್ಕಾಲರ್ ಶಿಪ್ ಅರ್ಜಿ ಆಹ್ವಾನಿಸಲಾಗಿದೆ. ಇ-ಗ್ರಾಂಟ್ಸ್ ಪೆÇೀರ್ಟಲ್‍ನಲ್ಲಿ ರಿಜಿಸ್ಟರ್ ಮಾಡಿದ ಗ್ರಾಂಟ್ಸ್ ಸ್ಕಾಲರ್ ಶಿಪ್ ಪಡೆಯುವ 2023-24ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಯಾ ಅನುದಾನಿತ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಸಂಸ್ಥೆಗಳ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಬಹುದು.
ಪೆÇೀಷಕರ ವಾರ್ಷಿಕ ಆದಾಯ ರೂಪಾಯಿ 2.50 ಲಕ್ಷ ಮೀರಬಾರದು. ಅರ್ಜಿ ಸಲ್ಲಿಸಲು ಆಧಾರ್ ಸೀಡೆಡ್ ಖಾತೆ ಕಡ್ಡಾಯವಾಗಿದ್ದು, ಅರ್ಜಿದಾರರು ಸಂಬಂಧಪಟ್ಟ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2024ನೇ ಫೆಬ್ರವರಿ 28 ಆಗಿದ್ದು, ಹೆಚ್ಚಿನ ವಿವರಗಳಿಗಾಗಿ ಆಯಾ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (0499 4256162)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.