ಕಾಸರಗೋಡು: ಉದುಮ ಏರೋಲ್ ನೆಲ್ಲಿಯಡ್ಕ ಪೂಡಂಕಲ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀಹರಿಸೇವಾ ಸಮಿತಿ ನೂತನ ಕಚೇರಿ ಉದ್ಘಾಟನೆಯ ಅಂಗವಾಗಿ ಗಣಪತಿ ಹೋಮ ಹಾಗೂ ಕ್ಷೀರಾಭಿಷೇಕ ಕಾರ್ಯಕ್ರಮ ಜರುಗಿತು. ಡಿ. 24ರಂದು ಮಧ್ಯಾಹ್ನ 3ಕ್ಕೆ ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ನೂತನ ಕಚೇರಿ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೃಷ್ಣನ್ ನಾಯರ್ ಮುನಿಕಲ್ ಅಧ್ಯಕ್ಷತೆ ವಹಿಸುವರು. ಆರೆಸ್ಸೆಸ್ ಕಾಞಂಗಾಡ್ ಜಿಲ್ಲಾ ಸಂಚಾಲಕ ಕೆ.ದಾಮೋದರನ್ ಇಂಜಿನಿಯರ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಬಿಎಂಎಸ್ ಜಿಲ್ಲಾಧ್ಯಕ್ಷ ಕೆ.ಉಪೇಂದ್ರನ್ ಕೋಟಕುನ್ನು, ಸೇವಾಭಾರತಿ ಜಿಲ್ಲಾಧ್ಯಕ್ಷ ಸಿ.ಕೆ.ವೇಣುಗೋಪಾಲ್, ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲಕೃಷ್ಣನ್ ಅಂಬಂಗಾಡ್, ಬಾಲಗೋಕುಲ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಸಿ.ಬಾಬು, ಹಿಂದೂಐಕ್ಯವೇದಿಯ ಮಾಜಿ ಜಿಲ್ಲಾಧ್ಯಕ್ಷ ವಾಸುದೇವ ಬಟ್ಟತ್ತೂರು, ಎ.ಕರುಣಾಕರನ್ ಮಾಸ್ಟರ್, ಸ್ವಾಗತಸಂಘದ ಕಾರ್ಯಾಧ್ಯಕ್ಷ ವೈ.ಕೃಷ್ಣದಾಸ್, ಸಂಚಾಲಕ ಕೆ.ಬಾಲಕೃಷ್ಣನ್ ಪಾಲ್ಗೊಳ್ಳುವರು. ಈ ಸಂದರ್ಭ ತುರ್ತು ಪರಿಸ್ಥಿತಿ ವಿರುದ್ಧ ಹೋರಟದಲ್ಲಿ ಭಾಗವಹಿಸಿದವರನ್ನು ಹಾಗೂ ಹಲವು ಕ್ಷೇತ್ರಗಳಲ್ಲಿನ ಪ್ರತಿಭಾನ್ವಿತರನ್ನು ಗೌರವಿಸಲಾಗುವುದು. ನಂತರ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಖ್ರಮದ ಪೂರ್ವಭಾವಿಯಾಗಿ ಮಧ್ಯಾಃನ 2.30ಕ್ಕೆ ಚಂದ್ರಾಪುರದಿಂದ ಪೂಡಂಕಲ್ಲು ವರೆಗೆ ಆಕರ್ಷಕ ಮೆರವಣಿಗೆ ನಡೆಯುವುದು.