ತಿರುವನಂತಪುರಂ: ಪಿಜಿ ವಿದ್ಯಾರ್ಥಿಯಾಗಿದ್ದ ಯುವ ವೈದ್ಯರೊಬ್ಬರು ಮೃತಪಟ್ಟ ಸ್ಥಿತಿಯಲಲಿ ಪತ್ತೆಯಾಗಿದ್ದಾರೆ. ವೆಂಜಾರಮೂಡ್‍ನ ಪುತ್ತೂರು ನಾಸ್ ಮನ್ಸಿಲ್‍ನಲ್ಲಿರುವ ತನ್ನ ಅಪಾರ್ಟ್‍ಮೆಂಟ್‍ನಲ್ಲಿ ಶಹಾನಾ ಮೃತಸ್ಥಿತಿಯಲ್ಲಿ ಪತ್ತೆಯಾದವರು. ಶಹಾನಾ ತಿರುವನಂತಪುರ ವೈದ್ಯಕೀಯ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ.
ಸೋಮವಾರ ರಾತ್ರಿ 11.30ರ ಸುಮಾರಿಗೆ ಶಹಾನಾ ತನ್ನ ಅಪಾರ್ಟ್‍ಮೆಂಟ್ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು. ತಕ್ಷಣ ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇದು ಆತ್ಮಹತ್ಯೆ ಎಂಬುದು ಪೆÇಲೀಸರ ಪ್ರಾಥಮಿಕ ತೀರ್ಮಾನ. ಅಪಾರ್ಟ್‍ಮೆಂಟ್‍ನಲ್ಲಿ ತಪಾಸಣೆ ನಡೆಸಿದಾಗ ಪತ್ರವೊಂದು ಪತ್ತೆಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.