ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮವಿಠಲ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಮೊದಲ ಹಂತವಾಗಿ ದೇವಸ್ಥಾನದ ನಕಾಶೆಯನ್ನು ಕ್ಷೇತ್ರದ ಮೊಕ್ತೇಸರ ಸಂಕೇಸ ವಾಸುದೇವ ಭಟ್ಟರು ಗುರುವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಸುಬ್ಬಣ್ಣ ಭಂಡಾರಿ, ಕೋಶಾಧಿಕಾರಿ ಶಿವರಾಜ್ ಭಟ್, ಸದಸ್ಯರಾದ ಗೀತಾ ವಿ ಭಟ್, ರಮಣಿ ಸತೀಶ್ ಚೌಟ, ಪ್ರಭ, ನಾರಾಯಣ, ರಾಧಾಕೃಷ್ಣ, ಸುಭಾಷ್, ಚಂದ್ರ, ಸಂಗೀತ ಎಸ್, ಚೈತ್ರ ಶಿವರಾಜ್ ಮತ್ತಿತ್ತರರು ಉಪಸ್ಥಿತರಿದ್ದರು.