ತಿರುವನಂತಪುರಂ: ವರದಕ್ಷಿಣೆ ಕೇಳುವವರನ್ನು ಹುಡುಗಿಯರು ತಿರಸ್ಕರಿಸಬೇಕೆಂದು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಪುನರುಚ್ಚರಿಸಿದ್ದಾರೆ. .
ಆರೀಫ್ ಮುಹಮ್ಮದ್ ಖಾನ್ ಮಾತನಾಡಿ, ವರದಕ್ಷಿಣೆ ವಿರುದ್ಧ ಸಮಾಜ ತೀವ್ರವಾಗಿ ಪ್ರತಿಕ್ರಿಯಿಸಬೇಕಿದೆ. ಇದರ ವಿರುದ್ಧ ಸಾಕಷ್ಟು ಜಾಗೃತಿ ಮೂಡಿಸಬೇಕು ಎಂದು ವರದಕ್ಷಿಣೆ ನೀಡಲಾಗದೆ ಆತ್ಮಹತ್ಯೆ ಮಾಡಿಕೊಂಡ ಯುವ ವೈದ್ಯೆ ಶಹನಾ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಹೆಣ್ಣುಮಕ್ಕಳು ವರದಕ್ಷಿಣೆ ಕೇಳುವವರನ್ನು ನಿರಾಕರಿಸುವಂತಿರಬೇಕು ಎಂದು ಹೇಳಿದ ರಾಜ್ಯಪಾಲರು, ಕೇರಳದಲ್ಲಿ ಈ ಘಟನೆ ನಡೆದಿರುವುದು ಬೇಸರ ತಂದಿದೆ. ವರದಕ್ಷಿಣೆ ಸಮಸ್ಯೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಹುಡುಗಿಯ ಮನೆಯವರಿಂದ ಹಣ ಕೇಳುವ ಹುಡುಗರು ಕ್ರೂರರು. ತಿರಸ್ಕರಿಸುವ ಶಕ್ತಿಯನ್ನು ಸ್ತ್ರೀಯರಿಗೆ ಪೋಷಕರು ನೀಡಬೇಕು ಎಂದು ತಿಳಿಸಿದರು. ರಾಜ್ಯಪಾಲರು ನಿನ್ನೆ ಮಧ್ಯಾಹ್ನ ಡಾ.ಶಹನಾ ಅವರ ಮನೆಗೆ ಆಗಮಿಸಿ ಪೋಷಕರನ್ನು ಭೇಟಿ ಮಾಡಿ ವಾಪಸ್ಸಾದರು.