HEALTH TIPS

ಛಾಯಾಗ್ರಹಣ ಕ್ಷೇತ್ರದ ಉದ್ಯೋಗ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಧ್ವನಿಯೆತ್ತುವೆ-ಶಾಸಕ ಎಕೆಎಂ ಅಶ್ರಫ್

           ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) 39ನೇ ಕಾಸರಗೋಡು ಜಿಲ್ಲಾ ಸಮ್ಮೇಳನ ವಿದ್ಯಾನಗರ ಉದಯಗಿರಿ ಶ್ರೀಹರಿ ಆಡಿಟೋರಿಯಂನಲ್ಲಿ ನಡೆಯಿತು.

          ಶಾಸಕ ಎ.ಕೆ.ಎಂ.ಅಶ್ರಫ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,  ಛಾಯಾಗ್ರಾಹಕರು ನಾಡಿನ ಸಮಸ್ಯೆಗಳನ್ನು ಸರ್ಕಾರದ ಮುಂದೆ ತೆರೆದಿಡುವ ಕಣ್ಣಾಗಿದ್ದು, ಈ ವಲಯದ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ  ಕರ್ತವ್ಯ. ಛಾಯಾಗ್ರಹಣ ಕ್ಷೇತ್ರದಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ ಅವರು ಎಕೆಪಿಎ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

             ಜಿಲ್ಲಾಧ್ಯಕ್ಷ ಕೆ.ಸಿ.ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ಮಧೂರು ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಶಿಕ್ಷಣ ಪ್ರಶಸ್ತಿ ವಿತರಿಸಿದರು. ಸಂಸ್ಥೆಯ ರಾಜ್ಯಾಧ್ಯಕ್ಷ ಸಂತೋಷ್ ಫೆÇೀಟೋ ವಲ್ರ್ಡ್ ಮುಖ್ಯ ಭಾಷಣ ಮಾಡಿದರು. ಸಮ್ಮೇಳನದ ಅಂಗವಾಗಿ ನಡೆದ ವ್ಯಾಪಾರ ಮೇಳವನ್ನು ರಾಜ್ಯ ಸಮಿತಿ ಕಾರ್ಯದರ್ಶಿ ಉಣ್ಣಿ ಕೂವೋಡ್  ಹಾಗೂ ಛಾಯಾಚಿತ್ರ ಮತ್ತು ವಿಡಿಯೋ ಪ್ರದರ್ಶನವನ್ನು ಪ್ರದನ ಕಾರ್ಯದರ್ಶಿ ಎ.ಸಿ.ಜಾನ್ಸನ್ ಉದ್ಘಾಟಿಸಿದರು.

            ರಾಜ್ಯ ಮಹಿಳಾ ವಿಭಾಗ ಸಮನ್ವಯಾಧಿಕಾರಿ ಹರೀಶ್ ಪಾಲಕುನ್ನು, ಜಿಲ್ಲಾ ಖಜಾಂಚಿ ವೇಣು ವಿ.ವಿ., ಜಿಲ್ಲಾ ಉಪಾಧ್ಯಕ್ಷರುಗಳಾದ ಶರೀಫ್ ಫ್ರೇಮ್ ಆರ್ಟ್, ವಿಜಯನ್ ಶೃಂಗಾರ್, ಜತೆ ಕಾರ್ಯದರ್ಶಿಗಳಾದ ಸುಧೀರ್ ಕೆ, ಮುಹಮ್ಮದ್ ಕುಞÂ, ಜಿಲ್ಲಾ ಕಲ್ಯಾಣ ನಿಧಿ ಅಧ್ಯಕ್ಷ ಪ್ರಶಾಂತ್ ಕೆ.ವಿ, ನ್ಯಾಚುರಲ್ ಕ್ಲಬ್ ಸಂಯೋಜಕ ದಿನೇಶ್ ಇನ್‍ಸೈಟ್, ಉಪ ಸಂಯೋಜಕ ಸುನೀಲ್ ಕುಮಾರ್ ಪಿ.ಟಿ, ಜಿಲ್ಲಾ ವಿಮಾ ಸಂಯೋಜಕ ಅಶೋಕನ್ ಪೆÇಯಿನಾಚಿ, ಜಿಲ್ಲಾ ರಕ್ತದಾನ ಸಂಯೋಜಕ ಪ್ರಜಿತ್ ಎನ್.ಕೆ, ಜಿಲ್ಲಾ ಸ್ಪೋಟ್ರ್ಸ್ ಕ್ಲಬ್ ಸಂಯೋಜಕ ಸುಕು ಸ್ಮಾರ್ಟ್, ಜಿಲ್ಲಾ ಮಹಿಳಾ ವಿಭಾಗದ ಸಂಯೋಜಕಿ ಪ್ರಜಿತಾ ಕಲಾಧರನ್ ಉಪಸ್ಥಿತರಿದ್ದರು.

               ಜಿಲ್ಲಾ ಕಾರ್ಯದರ್ಶಿ ಸುಗುಣನ್ ಇರಿಯಾ ಸ್ವಾಗತಿಸಿದರು. ಜಿಲ್ಲಾ ಪಿಆರ್‍ಒ ಗೋವಿಂದನ್ ಚಂಗರಂಕಾಡ್ ವಂದಿಸಿದರು.

          ಛಾಯಾಗ್ರಹಣ ಕ್ಷೇತ್ರದಲ್ಲಿನ ಅನಧಿಕೃತ ಕಾರ್ಯಾಚರಣೆ ಕೊನೆಗೊಳಿಸಬೇಕು, ಛಾಯಾಗ್ರಹಣ ವಲಯದ ಎಲ್ಲ ಕಾರ್ಮಿಕರಿಗೆ ಇಎಸ್‍ಐ ಸೌಲಭ್ಯ ಒದಗಿಸಬೇಕು, ಅಕ್ಷಯ ಕೇಂದ್ರಗಳು ಮತ್ತು ಇತರ ಆನ್‍ಲೈನ್ ಸಂಸ್ಥೆಗಳಲ್ಲಿ ಕಳಪೆ ಫೆÇೀಟೋ ಪ್ರಿಂಟ್‍ಗಳನ್ನು ಕಡಿಮೆ ಬೆಲೆಗೆ ನೀಡುವುದನ್ನು ಕೊನೆಗೊಳಿಸಬೇಕು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಂಗಡಿಗಳು ಮತ್ತು ಸ್ಟುಡಿಯೋಗಳನ್ನು ಕಳೆದುಕೊಂಡವರಿಗೆ ತಕ್ಷಣ ಪರಿಹಾರ ನೀಡಬೇಕು, ಕಾಸರಗೋಡು ವೈದ್ಯಕೀಯ ಕಾಲೇಜು ಕಮಗಾರಿ ಶೀಘ್ರ ಪೂರ್ತಿಗೊಳಿಸಬೇಕು, ಎಂಡೋಸಲ್ಫರ್ ಸಂತ್ರಸ್ತರಿಗೆ ಸರ್ಕಾರ ಅಗತ್ಯ ನೆರವು ಒದಗಿಸಬೇಕು ಮುಂತಾದ ಬೇಡಿಕೆಯುಳ್ಳ ಠರಾವು ಮಂಡಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries