HEALTH TIPS

ಕೇರಳ ರಾಜ್ಯ ಶಾಲಾ ಕ್ರಿಕೆಟ್ ತಂಡಕ್ಕೆ ಅನ್ವಿತ ಆರ್.ವಿ. ಆಯ್ಕೆ

                   ಮುಳ್ಳೇರಿಯ: ಕಾರಡ್ಕ ಜಿ.ವಿ.ಎಚ್.ಎಸ್.ಎಸ್. ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ಅನ್ವಿತ ಆರ್.ವಿ. ಕೇರಳ ರಾಜ್ಯ ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಕಾಸರಗೋಡು ಜಿಲ್ಲಾ ಶಾಲಾ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾರೆ. ಈ ಎರಡೂ ತಂಡಕ್ಕೆ ಆಯ್ಕೆಯಾದ ಕಾಸರಗೋಡಿನ ಏಕಮಾತ್ರ ಆಟಗಾರ್ತಿಯಾಗಿದ್ದಾರೆ. 

                ಕಾರಡ್ಕ ನೆಚ್ಚಿಪಡ್ಪು ರಾಮಚಂದ್ರ-ವಿದ್ಯಾ ದಂಪತಿಗಳ ಕಿರಿಯ ಪುತ್ರಿಯಾದ ಅನ್ವಿತ ಆರ್.ವಿ. ಕ್ರಿಕೆಟ್‍ನಲ್ಲಿ ಪ್ರತಿಭಾನ್ವಿತರಾಗಿದ್ದಾರೆ. ತನ್ನ 14 ನೇ ವಯಸ್ಸಿನಲ್ಲಿ ತಂದೆಯ ಮಾರ್ಗದರ್ಶನ ಮತ್ತು ತರಬೇತಿಯ ಮೂಲಕ ಕ್ರಿಕೆಟ್ ಆಡಲು ಆರಂಭಿಸಿದ್ದು, ತನ್ನ ಮೊದಲ ಪ್ರಯತ್ನದಲ್ಲೇ ಜಿಲ್ಲಾ ತಂಡಕ್ಕೆ ಆಯ್ಕೆಯಾಗಿದ್ದು, ಈ ಹಿಂದೆ ಜಿಲ್ಲಾ ತಂಡದ ಉಪನಾಯಕಿಯಾಗಿಯೂ, 15 ವರ್ಷಕ್ಕಿಂತ ಕೆಳಗಿನ ಉತ್ತರ ವಲಯ ತಂಡದಲ್ಲಿ ಕಳೆದ 2 ಸಲವೂ, 19 ವರ್ಷ ಕೆಳಗಿನ ಉತ್ತರ ವಲಯ ತಂಡದಲ್ಲೂ ಭಾಗವಹಿಸಿದ್ದಾರೆ. 19 ವರ್ಷ ಕೆಳಗಿನ ಪಂದ್ಯದಲ್ಲಿ ಔಟಾಗದೇ 51 ರನ್ ಹಾಗು 5 ಓವರ್‍ಗಳಲ್ಲಿ 13 ರನ್ ಕೊಟ್ಟು 1 ವಿಕೆಟ್ ಪಡೆದದ್ದು ವಿಶೇಷ ಸಾಧನೆಯಾಗಿದೆ. ಕೆ.ಸಿ.ಎ. 15 ವರ್ಷಕ್ಕಿಂತ ಕಿರಿಯ ರಾಜ್ಯ ಆಯ್ಕೆ ತಂಡದಲ್ಲಿ ಭಾಗವಹಿಸಿದ್ದಾರೆ. ಕಾಸರಗೋಡಿನ ಜಾಸ್ಮಿನ್ ಕ್ರಿಕೆಟ್ ಅಸೋಸಿಯೇಶನ್‍ನ ಶದಾಬ್ ಖಾನ್ ಕೋಚ್ ಆಗಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries