ಕಾಸರಗೋಡು: ಕೇರಳದ ಪಾಲಕ್ಕಾಡಿನಲ್ಲಿ ಜರುಗಿದ ರಾಜ್ಯಮಟ್ಟದ ಶಾಲಾ ಕಬಡ್ಡಿ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆಯನ್ನು ಪ್ರತಿನಿಧೀಕರಿಸಿದ ಕೂಡ್ಲು ಶಾಲೆಯ ದೀಕ್ಷಾ ವಿ.ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಇದೇ ಶಾಲೆಯ ಶರಣ್ಯ ಸಿ ಎಸ್ ರಾಷ್ಟ್ರ ಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಇಬ್ಬರುಪ್ರತಿಭೆಗಳನ್ನು ಶಾಲಾ ವತಿಯಿಂದ ಶಾಲುಹೊದಿಸಿ,ಹಾರ, ಹೂಗುಚ್ಚ ನೀಡಿ ಗೌgವಿಸಲಾಯಿತು.
ಸಮಾರಂಭದಲ್ಲಿ ಶಾಲಾ ವ್ಯವಸ್ಥಾಪಕರಾದ ಕೆ ಜಿ. ಶ್ಯಾನುಭಾಗ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ್ ಉಪಸ್ಥಿತರಿದ್ದರು, ಶಾಲಾ ಮುಖ್ಯೋಪಧ್ಯಾಯ ಶ್ರೀಹರಿ, ಕ್ರೀಡಾ ಆದ್ಯಾಪಕರಾದ ಟಿ. ವೆಂಕಟ್ರಮಣ ಭಟ್, ರಂಜನ್ ಐಲ,ಸ್ಟಾಫ್ ಸೆಕ್ರೆಟರಿ ಕಿರಣ್ ಪ್ರಸಾದ್ ಕೂಡ್ಲು ನೇತೃತ್ವ ವಹಿಸಿದ್ದರು. ಈ ಸಂದರ್ಭ ವಿಜೇತ ವಿದ್ಯಾರ್ಥಿಗಳನ್ನು ಮೆರವಣಿಗೆಯೊಂದಿಗೆ ಕರೆದೊಯ್ಯಲಾಯಿತು.