ಪೆರ್ಲ: ಭಾರತೀಯ ಜನತಾ ಪಕ್ಷ ಎಣ್ಮಕಜೆ ಪಂಚಾಯಿತಿ ಸಮಿತಿ ವತಿಯಿಂದ ಬಿಜೆಪಿ ಸ್ನೇಹ ಯಾತ್ರೆಯ ಅಂಗವಾಗಿ ಉಕ್ಕಿನಡ್ಕ ,ಮಣಿಯಂಪಾರೆ,ಇಡಿಯಡ್ಕದ ಇಗರ್ಜಿಗಳಿಗೆ ಭೇಟಿನೀಡಿ ಕ್ರಿಸ್ಮಸ್ ಹಬ್ಬದ ಶುಭಾಶ ವಿನಿಮಯ ಮತ್ತು ಕೇಕ್ ನೀಡಿ ಶುಭ ಕೋರಲಾಯಿತು.
ಬಿಜೆಪಿ ಕೇರಳ ಕೌನ್ಸಿಲ್ ಸದಸ್ಯರಾದ ವಿ. ರವೀಂದ್ರನ್, ಬಿಜೆಪಿ ಕುಂಬಳೆ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಮಯ್ಯ, ಬಿಜೆಪಿ ಎಣ್ಮಕಜೆ ಸಮಿತಿ ಅಧ್ಯಕ್ಷ ಸುಮಿತ್‍ರಾಜ್, ಬಿಜೆಪಿ ಮುಖಮಡರಾದ ಚಂದ್ರಕಾಂತ್ ಶೆಟ್ಟಿ, ಪುನೀತ್, ವಿನಯ ಉಕ್ಕಿನಡ್ಕ, ಗಣೇಶ್ ಕೆ. ನ್, ವೀರೇಂದ್ರ ಪ್ರಸಾದ್ ಮುಣಿಯಂಪಾರೆ, ಜಗದೀಶ್ಚಂದ್ರ ಕುತ್ತಾಜೆ, ವಿಜಯ ಆಳ್ವ ವಾಣಿನಗರ ಮುಂತಾದವರು ಭಾಗಹಿಸಿದ್ದರು.