ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಕಾಮಧೇನು ಗೋಶಾಲೆಯಲ್ಲಿ ಡಿ.10 ರಂದು ಭಾನುವಾರ ಅಪರಾಹ್ನ 3.ರಿಂದ 5. ರ ವರೆಗೆ ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್, ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್ ಮತ್ತು ಮುಂಬಯಿಯ ದಿನೇಶ್ ಬಾಹ್ರಾ ಫೌಂಡೇಶನ್ ಸಹಯೋಗದಲ್ಲಿ ಹೈನುಗಾರರಿಗೆ ಹೋಮಿಯೋಪತಿ ಗೋಚಿಕಿತ್ಸೆ ಮತ್ತು ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಂಗಳೂರಿನ ಡಾ. ಮನೋಹರ ಉಪಾಧ್ಯಾಯರು ಶಿಬಿರ ನಡೆಸಿಕೊಡಲಿದ್ದಾರೆ. ಆಸಕ್ತ ಗೋಪಾಲಕರು ಈ ಶಿಬಿರದ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.