ಕಾಸರಗೋಡು: ಮಣ್ಣು ಮತ್ತು ಜಲ ಸಂರಕ್ಷಣೆಯಿಂದ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯ ಜಿವನ ಸಾಗಿಸಲು ಸಾಧ್ಯ ಎಂಬುದಾಗಿ ಪಡನ್ನಕ್ಕಾಡ್ ಕೃಷಿ ಕಾಲೇಜು ನಿವೃತ್ತ ಡೀನ್ ಡಾ. ಪಿ.ಆರ್. ಸುರೇಶ್ ತಿಳಿಸಿದ್ದಾರೆ.
ಅವರು ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ಮಂಗಳವಾರ ಸಿಪಿಸಿಆರ್‍ಐ ಸಭಾಂಗಣದಲ್ಲಿ ನಡೆದ ವಿಶ್ವ ಮಣ್ಣು ಸಂರಕ್ಷಣಾ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಮಣ್ಣಿನ ಆರೋಗ್ಯ ತಪಾಸಣೆ ನಡೆಸಿದ ಕಾರ್ಡ್‍ಗಳನ್ನು ಡಾ. ಪಿ.ಆರ್ ಸುರೇಶ್ ಕೃಷಿಕರಿಗೆ ವಿತರಿಸಿದರು. ಕಾಸರಗೋಡು ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಕೃಷಿ ವಿಸ್ತರಣಾ ತರಬೇತಿ ಕೇಂದ್ರ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ರಮೇಶ ಬಾರಿಕ್ಕಾಡ್ ಉಪಸ್ಥಿತರಿದ್ದರು. ಸಿಪಿಸಿಆರ್‍ಐನ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ.ಪಿ.ಸುಬ್ರಮಣಿಯನ್ ಸ್ವಾಗತಿಸಿದರು. ಸಿಪಿಸಿಆರ್‍ಐ ಹಿರಿಯ ವಿಜ್ಞಾನಿ ಡಾ.ನೀನು. ಎಸ್. ವಂದಿಸಿದರು.
'ವಿಶ್ವ ಮಣ್ಣು ಸಂರಕ್ಷಣಾ ದಿನ-2023' ರ ಅಂಗವಾಗಿ ನಡೆದ ಪೆÇೀಸ್ಟರ್ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು. 2023 ರ "ಮಣ್ಣು ಮತ್ತು ನೀರು: ಜೀವನಕ್ಕೆ ಮೂಲ" ಎಂಬ ವಿಷಯದ ಕುರಿತು ತಾಂತ್ರಿಕ ಅಧಿವೇಶನವನ್ನು ಡಾ. ಪಿ.ಆರ್.ಸುರೇಶ್ (ಮಾಜಿ ಡೀನ್, ಕೃಷಿ ಕಾಲೇಜು, ಪಡನ್ನಕ್ಕಾಡ್), ಡಾ.ರಮೇಶ ಬಾರಿಕ್ಕಾಡ್ (ಮುಖ್ಯರು, ವಿಸ್ತರಣಾ ತರಬೇತಿ ಕೇಂದ್ರ, ಮಂಜೇಶ್ವರಂ. ), ಸಿಪಿಸಿಆರ್‍ಐ ಹಿರಿಯ ವಿಜ್ಞಾನಿ ಡಾ. ತಂಬಾನ್ ಸಿ., ಬೆಳೆ ಉತ್ಪಾದನೆ ವಿಭಾಗ ಮುಖ್ಯಸ್ಥ ಡಾ.ಪಿ.ಸುಬ್ರಮಣಿಯನ್, , ಡಾ.ನೀನು, ಎಸ್. ಮತ್ತು ಮಣ್ಣು ಸಮರಕ್ಷಣಾ ವಿಜ್ಞಾನದ ಹಿರಿಯ ವಿಜ್ಞಾನಿ ಡಾ.ವಿ.ಸೆಲ್ವಮಣಿ, ಕಾಸರಗೋಡು ಜಿಲ್ಲೆಯ ಆಹ್ವಾನಿತ ಕೃಷಿಕರು ತಾಂತ್ರಿಕ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.