ಅಹಮದಾಬಾದ್: 'ಅಯೋಧ್ಯೆಯ ರಾಮ ಮಂದಿರದ ಅರ್ಚಕ' ಎಂಬ ಒಕ್ಕಣೆಯೊಂದಿಗೆ ವ್ಯಕ್ತಿಯೊಬ್ಬರ ಅಶ್ಲೀಲ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪದಡಿ ಕಾಂಗ್ರೆಸ್ ಮುಖಂಡ ಹಿತೇಂದ್ರ ಪೀಠಾಡಿಯಾ ಎಂಬುವವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಹಿತೇಂದ್ರ ಅವರು ಪಕ್ಷದ ಎಸ್‌ಸಿ ಘಟಕದ ಮುಖ್ಯಸ್ಥ ಎಂದು ಕಾಂಗ್ರೆಸ್‌ನ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
ಸ್ಥಳೀಯ ಬಿಜೆಪಿ ಮುಖಂಡ ವೈಭವ್ ಮಕ್ವಾನ ಅವರು ನೀಡಿದ ದೂರಿನ ಮೇಲೆ, ನಗರದ ಕ್ರೈಂ ಬ್ರ್ಯಾಂಚ್ ಪೊಲೀಸರು ಹಿತೇಂದ್ರ ಅವರನ್ನು ಬಂಧಿಸಿದ್ದಾರೆ.
ಮೋಹಿತ್ ಪಾಂಡೆ ಎಂಬುವವರು ಅಯೋಧ್ಯೆಯ ರಾಮ ಮಂದಿರದಲ್ಲಿ ಅರ್ಚಕರಾಗಿ ನೇಮಕಗೊಂಡಿದ್ದಾರೆ.
'ಪಾಂಡೆ ಅವರನ್ನು ಹೋಲುವ ವ್ಯಕ್ತಿಯ ಚಿತ್ರವನ್ನು ಬಳಸಿ, ನಕಲಿ ಚಿತ್ರವನ್ನು ರೂಪಿಸಲಾಗಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಅಶ್ಲೀಲ ಚಿತ್ರವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಲಾಗಿದೆ' ಎಂದು ಮಕ್ವಾನ ಅವರ ಹೇಳಿಕೆಯನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.