ಸಿಂಗಪುರ (PTI): ಸಿಂಗಪುರದಲ್ಲಿ ಕೋವಿಡ್-19 ದೃಢ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದರ ಪರಿಣಾಮ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ.

'ಕೋವಿಡ್ ಪ್ರಕರಣಗಳೇನೋ ಹೆಚ್ಚುತ್ತಿವೆ. ಆದರೆ, ಈ ಹಿಂದೆ ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಇದ್ದ ರೀತಿಯ ಪರಿಸ್ಥಿತಿ ಇಲ್ಲ. ಈಗ ಪ್ರಸರಿಸುತ್ತಿರುವ ರೂಪಾಂತರದಿಂದ ಜ್ವರದ ತೀವ್ರತೆ ಎಷ್ಟಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ' ಎಂದು ಇಲಾಖೆಯ ಪ್ರಕಟಣೆ ಹೇಳಿದೆ.
ಕಳೆದ ವಾರ ಒಟ್ಟು 32,035 ಜನರಲ್ಲಿ ಕೋವಿಡ್ ದೃಢಪಟ್ಟಿತ್ತು. ಇದು ಈ ವರ್ಷದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿವೆ ಎಂದು 'ದಿ ಸ್ಟ್ರೈಟ್ಸ್ ಟೈಮ್ಸ್' ವರದಿ ಮಾಡಿದೆ. ಇದಕ್ಕೂ ಹಿಂದೆ ಅಂದರೆ, ಮಾರ್ಚ್ ತಿಂಗಳ ವಾರವೊಂದರಲ್ಲಿ 28,410 ಮಂದಿಗೆ ಸೋಂಕು ದೃಢಪಟ್ಟಿತ್ತು ಎಂದು ಅದು ತಿಳಿಸಿದೆ.
ಕಳೆದ ಎರಡು, ಮೂರು ತಿಂಗಳಿಂದ ಪ್ರತಿ ವಾರ ಸುಮಾರು 15 ಸಾವಿರ ಕೋವಿಡ್ ದೃಢ ಪ್ರಕರಣಗಳು ವರದಿಯಾಗುತ್ತಿವೆ. ಇದರ ಪರಿಣಾಮ ಆಸ್ಪತ್ರೆಗೆ ದಾಖಲಾಗುವವರ ಮತ್ತು ತೀವ್ರ ನಿಗಾ ಘಟಕದಲ್ಲಿ ದಾಖಲಾಗುವವರ ಸಂಖ್ಯೆ ಏರುತ್ತಿದೆ ಎಂದು ಪ್ರಕಟಣೆ ಹೇಳಿದೆ.