ಕಾಸರಗೋಡು: ದಿ ಜರ್ನಿ ಆಫ್ ಸೊಸೈಟಿ ಕನ್ನಡ ವಾರ ಪತ್ರಿಕೆ, ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರ ಗಳಲ್ಲಿ ಗಣನೀಯ ಸಾಧನೆಗೈದ ಸಾಧಕರೀಗೆ ನೀಡುವ ರಾಜ್ಯ ಮಟ್ಟದ "ಕುವೆಂಪು ರಾಜ್ಯ ಪ್ರಶಸ್ತಿ'ಯನ್ನು ಗಡಿನಾಡು ಕಾಸರಗೋಡು ಜಿಲ್ಲೆಯ ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಅವರಿಗೆ ವಿಜಯಪುರ ಹಂಪಿಯ ಶ್ರೀ ದುರ್ಗಾದಾಸ ಕಲಾಮಂದಿರದಲ್ಲಿ ಪ್ರದಾನಮಾಡಲಾಯಿತು.
ಸಮಾರಂಭದ ಉದ್ಘಾಟಕಿ, ಪತ್ರಕರ್ತೆ ಭಾವನಾ ಬೆಳಗೆರೆ ಪ್ರಶಸ್ತಿ ನೀಡಿ ಗೌರವಿಸಿದರು. ಪದ್ಮಶ್ರೀ ಪುರಸ್ಕøತ ಶ್ರೀ ಮಾತ ಮಂಜಯ್ಯ ಜೋಗತಿ, ಚಿತ್ರ ನಟಿ ಡಾ ಪಂಕಜ, ಪತ್ರಿಕೆ ಸಂಪಾದಕ ವೀರೇಶ್ ಆರ್ ಬಿ, ಶಾಸಕರಾದ ಎ.ಆರ್ ಗವಿಯಪ್ಪ, ಗಾಲಿ ಜನಾರ್ದನ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸಲು ಗ್ರಂಥಾಲಯ, ಕನ್ನಡಿಗರಿಗಾಗಿ ಉಚಿತ ವಸತಿ ವ್ಯವಸ್ಥೆ, ಕನ್ನಡ ಭವನ ಪ್ರಕಾಶನ, ವಿವಿಧ ಸ್ತರಗಳಲ್ಲಿ ಪ್ರಶಸ್ತಿ, ಹಾಗೂ ಯುವ ಪ್ರತಿಭೆಗಳಿಗೆ ಭರವಸೆಯ ಬೆಳಕು ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿರುವುದನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.