ಪತ್ತನಂತಿಟ್ಟ: ಕಟ್ಟಡದಿಂದ ಬಿದ್ದು ಎಂಬಿಬಿಎಸ್ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪತ್ತನಂತಿಟ್ಟದಲ್ಲಿ ನಿನ್ನೆ ನಡೆದಿದೆ. ನಿನ್ನೆ ರಾತ್ರಿ 10.30ಕ್ಕೆ ಈ ಘಟನೆ ನಡೆದಿದೆ.
ಪತ್ತನಂತಿಟ್ಟ ಬಿಲೀವರ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.ಕೊಲ್ಲಂ ಆಶ್ರಮದ ಜಾನ್ ಥಾಮಸ್ ಮೃತರು. ಆತನಿಗೆ 26 ವರ್ಷ, ಸಾವಿನಲ್ಲಿ ಯಾವುದೇ ನಿಗೂಢತೆ ಇಲ್ಲ ಎಂದು ಪೋಲೀಸರು ಹೇಳಿಕೆ ನೀಡಿದ್ದು, ಯುವಕ ಕಾಲು ಜಾರಿ ಬಿದ್ದಿರುವುದಾಗಿ ಹೇಳಲಾಗಿದೆ.