ಕೊಚ್ಚಿ: ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನಕ್ಕೆ ಇಲ್ಲಿನ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಕ್ಷಣಾ ಸಚಿವಾಲಯವು ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಕೊಚ್ಚಿ: ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನಕ್ಕೆ ಇಲ್ಲಿನ ನೌಕಾಪಡೆಯ ವಿಮಾನ ನಿಲ್ದಾಣದಲ್ಲಿ ಇಳಿಯಲು ರಕ್ಷಣಾ ಸಚಿವಾಲಯವು ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಆರಂಭದಲ್ಲಿ ರಾಹುಲ್ ಗಾಂಧಿ ಅವರ ವಿಮಾನ ಲ್ಯಾಂಡ್ ಆಗಲು ಅನುಮತಿಸಲಾಗಿತ್ತು.
ಇದರಿಂದಾಗಿ ಕಣ್ಣೂರು ಜಿಲ್ಲೆಯಿಂದ ರಾಹುಲ್ ಗಾಂಧಿ ಹೊರಟ ವಿಮಾನವು ನೆಡುಂಬಶ್ಶೇರಿಯ ಕೊಚ್ಚಿನ್ ಅಂತರರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್ (ಸಿಐಎಎಲ್) ನಿಲ್ದಾಣದಲ್ಲಿ ಇಳಿಸಲು ಸೂಚಿಸಲಾಯಿತು ಎಂದು ಅವರು ತಿಳಿಸಿದರು.
ಸದ್ಯ ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಇಂದು ಕೊಚ್ಚಿಯಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.