ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಮಾವುಂಗಾಲ್‍ನಲ್ಲಿ ಕೆಎಸ್ಸಾರ್ಟಿಸಿ-ಬಸ್ ಕಾರು ಡಿಕ್ಕಿಯಾಗಿ ಹಲವು ಮಂದಿ ಗಾಯಗೊಮಡಿದ್ದಾರೆ. ಅಪಘಾತದ ನಂತರ ಅಸೌಖ್ಯ ಕಾಣಿಸಿಕೊಂಡ ಬಸ್ಸಿನ ಚಾಲಕ ಪ್ರವೀಣ್ ಅವರನ್ನು ಕಣ್ಣೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಞಂಗಾಡಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಎದುರು ಭಾಗದಿಂದ ಆಗಮಿಸಿದ ಬಸ್ ಪರಸ್ಪರ ಡಿಕ್ಕಿಯಾಗಿತ್ತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗದ ಏರ್ ಬ್ಯಾಗ್ ತೆರೆದುಕೊಂಡ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರು ಗಂಭೀರ ಗಾಯಗಳಿಂದ ಪಾರಾಗಿದ್ದರು. ಗಾಯಾಳುಗಳು ಕಾಞಂಗಾಡಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.