ಬದಿಯಡ್ಕ: ಶ್ರೀಮದ್ ಎಡನೀರು ಮಠಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಿನ್ನೆ ಭೇಟಿ ನೀಡಿದರು.
ದಕ್ಷಿಣಾಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ದರ್ಶನ ಪಡೆದ ಅವರು ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಆಶೀರ್ವಾದ ಮಂತ್ರಾಕ್ಷತೆ ಸ್ವೀಕರಿಸಿದರು. ಎಡನೀರು ಮಠದ ಬ್ರಹ್ಮೈಕ್ಯ ಪೂರ್ವ ಸ್ವಾಮೀಜಿಗಳವರ ವೃಂದಾವನದ ದರ್ಶನಗೈದರು.
ಈ ಸಂದರ್ಭ ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಅವರು ಗುರುಸ್ಮರಣೆ ನಡೆಸಿದರು. ಡಾ.ಹೆಗ್ಗಡೆಯವರು ಭಕ್ತರನ್ನು ಉದ್ದೇಶಿಸಿ ಹಿತನುಡಿದರು. ಕರ್ನಾಟಕ ಸರ್ಕಾರದ ಮಾನವಹಕ್ಕುಗಳ ಆಯೋಗದ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದ ಡಾ.ಟಿ.ಶ್ಯಾಂ ಭಟ್ ಅವರಿಗೆ ಗೌರವಾಭಿನಂದನೆ ನಡೆಯಿತು.