ನವದೆಹಲಿ: ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಲುಕಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ದೆಹಲಿಯ ಇಂದರ್‌ಲೋಕ್ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ.
ನವದೆಹಲಿ: ಮೆಟ್ರೊ ರೈಲಿನ ಬಾಗಿಲಿಗೆ ಸೀರೆ ಸಿಲುಕಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ದೆಹಲಿಯ ಇಂದರ್‌ಲೋಕ್ ಮೆಟ್ರೊ ನಿಲ್ದಾಣದಲ್ಲಿ ನಡೆದಿದೆ.
ರೀನಾ ಮೃತ ಮಹಿಳೆ. ಪ್ರಾಥಮಿಕ ವರದಿಯ ಪ್ರಕಾರ, ಮಹಿಳೆಯ ಸೀರೆ ಮೆಟ್ರೊ ಬಾಗಿಲುಗಳ ಮಧ್ಯದಲ್ಲಿ ಸಿಲುಕಿಕೊಂಡಿತ್ತು.
ಘಟನೆ ವೇಳೆ ಮಹಿಳೆ ರೈಲು ಹತ್ತುತ್ತಿದ್ದರೋ ಅಥವಾ ಇಳಿಯುತ್ತಿದ್ದರೋ ಎನ್ನುವುದು ಸ್ಪಷ್ಟವಾಗಿಲ್ಲ. ಮೆಟ್ರೊ ರೈಲ್ವೆ ಸುರಕ್ಷತೆಯ ಆಯುಕ್ತರು ಘಟನೆಯ ಕುರಿತು ವಿಚಾರಣೆ ನಡೆಸಲಿದ್ದಾರೆ ಎಂದು ದೆಹಲಿ ಮೆಟ್ರೋದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನುಜ್ ದಯಾಳ್ ಹೇಳಿದ್ದಾರೆ.
ಇಂದರ್‌ಲೋಕ್ ನಿಲ್ದಾಣದಲ್ಲಿ ಮಹಿಳೆ ರೈಲು ಬದಲಿಸುತ್ತಿದ್ದರು. ಈ ವೇಳೆ ಆಕೆಯ ಸೀರೆ ರೈಲಿನ ಬಾಗಿಲ ಮಧ್ಯೆ ಸಿಲುಕಿಕೊಂಡು ಬಿದ್ದಿದ್ದಾರೆ. ಘಟನೆಯಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು, ತಕ್ಷಣವೇ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮಹಿಳೆಯ ಸಂಬಂಧಿ ಮಾಹಿತಿ ನೀಡಿದ್ದಾರೆ.