ಪ್ರಯಾಗರಾಜ್: ಅಲಹಾಬಾದ್ ವಿಶ್ವವಿದ್ಯಾಲಯ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕೋಣೆಯಲ್ಲಿ ತಾನೇ ತಯಾರಿಸುತ್ತಿದ್ದ ಬಾಂಬ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಈ ಘಟನೆ ನಡೆದಿದೆ. ಎಂ.ಎ ವಿದ್ಯಾರ್ಥಿಯಾಗಿರುವ ಪ್ರಭಾತ್ ಯಾದವ್ ಎಂಬುವವರು ತಮ್ಮ ಕೋಣೆಯಲ್ಲಿ ಏಕೆ ಬಾಂಬ್ ತಯಾರಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತ ರಾಜೇಶ್ ಕುಮಾರ್ ಹೇಳಿದ್ದಾರೆ.
ಗಾಯಾಳನ್ನು ಎಸ್‌ಆರ್‌ಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದಿದ್ದಾರೆ.
ಪ್ರಭಾತ್ ವಿರುದ್ಧ ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು ಎಂದು ರಾಜೇಶ್ ಮಾಹಿತಿ ನೀಡಿದ್ದಾರೆ.