ಕೋಝಿಕ್ಕೋಡ್: ಮದುವೆಗೂ ಮುನ್ನ ಪ್ರೀತಿಸುತ್ತಿದ್ದಾಗ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪತಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ತನಗೆ 18 ವರ್ಷ ತುಂಬುವ ಮುನ್ನವೇ ತನಗೆ ಕಿರುಕುಳ ನೀಡಲಾಗಿತ್ತು ಎಂದು ಪತಿ ವಿರುದ್ಧ ಮಹಿಳೆ ದೂರು ದಾಖಲಿಸಿದ್ದರು. ಆಕೆಯ ಪತಿಯ ಎಂಟು ಸ್ನೇಹಿತರ ವಿರುದ್ಧ ಕಿರುಕುಳಕ್ಕೆÉ ನೆರವು ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯ ಅವರನ್ನೂ ಖುಲಾಸೆಗೊಳಿಸಿದೆ.
ಆಕೆ ಪ್ರಾಯಕ್ಕೆ ಬರುವ ಮುನ್ನವೇ ಸ್ನೇಹಿತನ ಮನೆಯಲ್ಲಿ ಪತಿ ಅತ್ಯಾಚಾರವೆಸಗಿದ್ದಾನೆ ಎಂಬುದು ದೂರು. ನಂತರ ಇಬ್ಬರೂ ವಿವಾಹವಾದರು, ಆದರೆ ಅವರ ದಾಂಪತ್ಯದಲ್ಲಿ ಸಮಸ್ಯೆಗಳು ಬಂದಾಗ, ಅವರು ಕಿರುಕುಳದ ದೂರು ನೀಡಿದರು. ಬಳಿಕ ಮಹಿಳೆ ತನ್ನ ಪತಿ ಹಾಗೂ ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದಾಳೆ.
ಕೋಝಿಕ್ಕೋಡ್ ನಡಕಾವ್ ಪೋಲೀಸರು ಪತಿಯನ್ನು ಮೊದಲ ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಿದ್ದರು. ಆಕೆಯ ಪತಿ ಮತ್ತು ಎಂಟು ಸ್ನೇಹಿತರ ವಿರುದ್ಧ 2021 ರಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೋಝಿಕ್ಕೋಡ್ ಫಾಸ್ಟ್ ಟ್ರ್ಯಾಕ್ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ರಾಜೀವ್ ಜಯರಾಜ್ ಅವರು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ.