ಕೋಝಿಕ್ಕೋಡ್: ನನ್ಮಂಡ ಸಂಸ್ಕøತಿ ಆಯೋಜಿಸಿರುವ ಭಾರತೀಯಂ ಎಂಬ ಉಪನ್ಯಾಸ ಮಾಲಿಕೆ ಕೋಝಿಕ್ಕೋಡ್ ನಲ್ಲಿ ಆರಂಭವಾಗಿದೆ. ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎನ್. ನಗರೇಶ್ ಭಾರತೀಯಮ್ ಉದ್ಘಾಟಿಸಿದರು. ಜಗತ್ತು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಭಾರತೀಯ ದರ್ಶನಗಳಲ್ಲಿ ಪರಿಹಾರವಿದೆ ಎಂದು ನ್ಯಾಯಮೂರ್ತಿ ಎನ್. ನಗರೇಶ್ ಹೇಳಿದರು.
ಸನಾತನ ಸಂಸ್ಕೃತಿಯ ಮೂಲ ತತ್ವಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತೀಯಂ ಎಂಬ ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿದೆ.
ನನ್ಮಂಡ ಸಂಸ್ಕೃತಿ ಅಧ್ಯಕ್ಷ ಎಂ.ಪ್ರದೀಪನ್ ಅಧ್ಯಕ್ಷತೆ ವಹಿಸಿದ್ದರು. ಸಂಪೂಜ್ಯ ಸ್ವಾಮಿನಿ ಶಿವಾನಂದಪುರಿ ಆಶೀರ್ವಚನ ನೀಡಿದರು. ಕೊಟ್ಟಕ್ಕಲ್ ಆಯುರ್ವೇದ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಎ.ಪಿ. ಹರಿದಾಸ್ ಅವರಿಗೆ ಧರ್ಮ ಪುರಸ್ಕಾರ ಪ್ರದಾನ ಮಾಡಲಾಯಿತು. ಏಳು ದಿನಗಳ ಸರಣಿ ಡಿಸೆಂಬರ್ 9ಕ್ಕೆ ಕೊನೆಗೊಳ್ಳಲಿದೆ.