ಭೋಪಾಲ: ವಿಶ್ವದ ಪ್ರಮಾಣಿತ ಸಮಯವನ್ನು ಭಾರತವು 300 ವರ್ಷಗಳ ಹಿಂದೆಯೇ ನಿಗದಿಗೊಳಿಸಿತ್ತು ಮತ್ತು ಸಮಯವನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತಿದ್ದ ಉಪಕರಣವು ಈಗಲೂ ರಾಜ್ಯದ ಉಜ್ಜೈನ್‌ನಲ್ಲಿ ಲಭ್ಯವಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಪ್ರತಿಪಾದಿಸಿದ್ದಾರೆ.
ಭೋಪಾಲ: ವಿಶ್ವದ ಪ್ರಮಾಣಿತ ಸಮಯವನ್ನು ಭಾರತವು 300 ವರ್ಷಗಳ ಹಿಂದೆಯೇ ನಿಗದಿಗೊಳಿಸಿತ್ತು ಮತ್ತು ಸಮಯವನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತಿದ್ದ ಉಪಕರಣವು ಈಗಲೂ ರಾಜ್ಯದ ಉಜ್ಜೈನ್‌ನಲ್ಲಿ ಲಭ್ಯವಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಪ್ರತಿಪಾದಿಸಿದ್ದಾರೆ.
ಸಮಯಕ್ಕೆ ಜಾಗತಿಕ ಉಲ್ಲೇಖವಾಗಿ ಬಳಕೆಯಾಗುತ್ತಿರುವ ರೇಖಾಂಶದ ರೇಖೆ ಪ್ರೈಮ್ ಮೆರಿಡಿಯನ್ (ಪ್ರಧಾನ ಮಧ್ಯಾಹ್ನ ರೇಖೆ) ಅನ್ನು ಇಂಗ್ಲಂಡ್‌ನ ಗ್ರೀನ್‌ವಿಚ್‌ನಿಂದ ಉಜ್ಜೈನ್‌ಗೆ ವರ್ಗಾಯಿಸುವ ನಿಟ್ಟಿನಲ್ಲಿ ತನ್ನ ಸರಕಾರವು ಶ್ರಮಿಸಲಿದೆ ಎಂದೂ ಅವರು ಹೇಳಿದರು.
ರಾಜ್ಯ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಉತ್ತರಿಸಿದ ಸಂದರ್ಭದಲ್ಲಿ ಯಾದವ್ ಈ ಹೇಳಿಕೆಯನ್ನು ನೀಡಿದರು.
ಪಾಶ್ಚಾತ್ಯೀಕರಣದ ವಿರುದ್ಧ ಕಿಡಿಕಾರಿದ ಯಾದವ,ಸುಮಾರು 300 ವರ್ಷಗಳ ಹಿಂದೆಯೇ ಭಾರತದ ಪ್ರಮಾಣಿತ ಸಮಯ (ಐಎಸ್‌ಟಿ)ವು ಜಗತ್ತಿಗೆ ತಿಳಿದಿತ್ತು. ಆದಾಗ್ಯೂ ಪ್ಯಾರಿಸ್ ಸಮಯವನ್ನು ನಿಗದಿಗೊಳಿಸಲು ಆರಂಭಿಸಿತ್ತು ಮತ್ತು ಬಳಿಕ ಗ್ರೀನ್‌ವಿಚ್‌ನ್ನು ಪ್ರೈಮ್ ಮೆರಿಡಿಯನ್ ಎಂದು ಪರಿಗಣಿಸಿದ್ದ ಬ್ರಿಟಿಷರು ಅದನ್ನು ಅಳವಡಿಸಿಕೊಂಡಿದ್ದರು ಎಂದು ಹೇಳಿದರು.
ಮಧ್ಯರಾತ್ರಿ 12 ಗಂಟೆಗೆ ಹೊಸದಿನದ ಆರಂಭವನ್ನು ಪ್ರಶ್ನಿಸಿದ ಅವರು ,ಯಾರೂ ತಮ್ಮ ದಿನವನ್ನು ಮಧ್ಯರಾತ್ರಿ ಆರಂಭಿಸುವುದಿಲ್ಲ. ಜನರು ಸೂರ್ಯೋದಯದೊಂದಿಗೆ ಅಥವಾ ಸ್ವಲ್ಪ ಸಮಯದ ಬಳಿಕ ಎದ್ದೇಳುತ್ತಾರೆ ಎಂದರು.
'ಉಜ್ಜೈನ್ ಜಾಗತಿಕ ಪ್ರೈಮ್ ಮೆರಿಡಿಯನ್ ಆಗಿದೆ ಎಂದು ಸಾಬೀತುಗೊಳಿಸಲು ನಮ್ಮ ಸರಕಾರವು ಶ್ರಮಿಸುತ್ತಿದೆ ಮತ್ತು ಜಗತ್ತಿನ ಸಮಯವನ್ನು ಸರಿಪಡಿಸಲು ನಾವು ಒತ್ತಾಯಿಸುತ್ತೇವೆ 'ಎಂದೂ ಯಾದವ ಹೇಳಿದರು.
ಪ್ರಾಚೀನ ಹಿಂದು ಖಗೋಳಶಾಸ್ತ್ರೀಯ ನಂಬಿಕೆಯ ಪ್ರಕಾರ ಉಜ್ಜೈನ್‌ನ್ನು ಭಾರತದ ಕೇಂದ್ರ ಮೆರಿಡಿಯನ್ ಎಂದು ಒಂದೊಮ್ಮೆ ಪರಿಗಣಿಸಲಾಗಿತ್ತು ಹಾಗೂ ನಗರವು ದೇಶದ ಸಮಯ ವಲಯಗಳನ್ನು ಮತ್ತು ಸಮಯ ವ್ಯತ್ಯಾಸಗಳನ್ನು ನಿರ್ಧರಿಸುತ್ತಿತ್ತು. ಅದು ಹಿಂದು ಕ್ಯಾಲೆಂಡರ್‌ನಲ್ಲಿ ಸಮಯದ ಆಧಾರವೂ ಆಗಿದೆ.