ಪತ್ತನಂತಿಟ್ಟ: ಪೋಲೀಸ್ ಠಾಣೆಯ ವಾಟ್ಸಾಪ್ ಗ್ರೂಪ್ ನಲ್ಲಿ ಎಸ್‍ಎಚ್‍ಒ ಮತ್ತು ರೈಟರ್ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಸಿವಿಲ್ ಅಧಿಕಾರಿ ಆತ್ಮಹತ್ಯೆ ಬೆದರಿಕೆ ನೀಡಿದ ಸಂದೇಶ ಹೊರಬಿದ್ದಿದೆ. ಪತ್ತನಂತಿಟ್ಟದ ಕೊಡುಮೋನ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿನ್ನೆ ಪೆÇಲೀಸ್ ಠಾಣೆಯ ವಾಟ್ಸಾಪ್ ಗ್ರೂಪ್‍ನಲ್ಲಿ ಸಂದೇಶ ಬಂದಿದೆ. ಸಿವಿಲ್ ಆಫೀಸರ್ ಸಂದೇಶದಲ್ಲಿ, ಎಸ್‍ಎಚ್‍ಒ ಮತ್ತು ರೈಟರ್ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಸಿವಿಲ್ ಪೋಲೀಸ್ ಅಧಿಕಾರಿ ಠಾಣೆಯ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದು, ಈ ನಡುವೆ ಅಸ್ವಸ್ಥರಾದಾಗ ರಜೆ ಎಂದು ಆಸ್ಪತ್ರೆಗೆ ತೆರಳಿದ್ದಕ್ಕೆ ಕಿರುಕುಳ ನೀಡಿ ಬೆದರಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಸಿವಿಲ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ನಿರಂತರ ಮಾನಸಿಕ ಹಿಂಸೆ ನೀಡುತ್ತಿದ್ದು, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಎಸ್‍ಎಚ್‍ಒ ಹಾಗೂ ರೈಟರ್ ಹೊಣೆಯಾಗುತ್ತಾರೆ ಎಂದು ತಿಳಿಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ ಸಿವಿಲ್ ಅಧಿಕಾರಿಯ ಟವರ್ ಲೊಕೇಶನ್ ಪರಿಶೀಲಿಸಿದ ಅಧಿಕಾರಿಗಳು ಅವರ ಮನೆಗೆ ತೆರಳಿ ಮನವೊಲಿಸಲು ಯತ್ನಿಸಿದರು. ಘಟನೆಯ ಕುರಿತು ತಕ್ಷಣ ವರದಿ ಸಲ್ಲಿಸುವಂತೆಯೂ ಎಸ್ಪಿ ಸೂಚಿಸಿದ್ದಾರೆ.