ಕಾಸರಗೋಡು: ರಾಷ್ಟ್ರೀಯ ವಿಶ್ವಕರ್ಮ ಫೆಡರೇಶನ್ (ಎನ್‍ವಿಎಫ್) ಜಿಲ್ಲಾ ಸಮ್ಮೇಳನ ಮತ್ತು ಕುಟುಂಬ ಸಮ್ಮಿಲನ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಿತು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಸಿ. ಕೆ. ಅಂಬಿ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸಮಿತಿ ಅಧ್ಯಕ್ಷ ಎಂ. ಸೀತಾರಾಮ ಆಚಾರ್ಯ, ಜಿ, ಕಾರ್ಯದರ್ಶಿ ರಾಘವನ್ ಕೊಳತ್ತೂರು, ರಾಷ್ಟ್ರೀಯ ಕಾರ್ಯಾಧ್ಯಕ್ಷ ಶಶಿ ಪಾಕ್ಕರ, ಸಂಘಟನೆ ಮುಖಂಡರಾದ ಉಮೇಶನ್ ಆಚಾರ್ಯ, ರಾಘವನ್ ದೊಡ್ಡುವಯಲ್, ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ವಸಂತಿ ಜೆ ಆಚಾರ್ಯ, ಎಂ. ಸಿ. ರವೀಂದ್ರನ್ ಮಲಪ್ಪುರಂ, ಚಂದ್ರನ್ ಕಲಾವಿದ, ಕೆ. ಕೆ. ಬಾಲನ್, ಸಜೀವ್ ಎರ್ನಾಕುಲಂ, ಗೋಪಾಲಕೃಷ್ಣನ್ ತ್ರಿಶೂರ್, ಗೀತಾ ಜಿ ತೊಪ್ಪಿಲ್, ನಿಶಾ ಚಂದ್ರನ್, ಪಿ. ಕೆ. ವಿಜಯನ್ ಮೊದಲಾದವರು ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ವಿಷ್ಣು ಆಚಾರ್ಯ ವಂದಿಸಿದರು.
2015 ರಲ್ಲಿ ಕೇರಳ ಸರ್ಕಾರಕ್ಕೆ ಸಲ್ಲಿಸಿದ ಶಂಕರನ್ ಆಯೋಗದ ವರದಿ ಜಾರಿಗೊಳಿಸಬೇಕು, 'ಪಿ.ಎಂ ಇಶ್ವಕರ್ಮ' ಯೋಜನೆ ಹಾಗೂ ಆಯುಷ್ಮಾನ್ ಭಾರತ್ ಯೋಜನೆಗಳನ್ನು ಕೇರಳದಲ್ಲಿ ಶೀಘ್ರ ಜಾರಿಗೊಳಿಸಬೇಕು, ವಿಶ್ವಕರ್ಮ ದಿನವನ್ನು ನಿಬರ್ಂಧಿತ ರಜೆ ಬದಲು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಬೇಕು, ಲೋಹ, ಮರ, ಶಿಲಾ ಕೆತ್ತನೆ ಕೆಲಸ ವಿಶ್ವಕರ್ಮ ಸಮುದಾಯದ ಮೂಲಕಸುಬಾಗಿರುವುದರಿಂದ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ಮೆಟಲರ್ಜಿ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಂತಾದ ಸಂಬಂಧಿತ ಅಧ್ಯಯನ ವಿಭಾಗಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು, ಶಿಕ್ಷಣ ಕ್ಷೇತ್ರಗಳಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಬೇಕು, ಎಲ್ಲಾ ಅರ್ಹ ವಿಶ್ವಕರ್ಮರನ್ನು ಬಿಪಿಎಲ್ ಪಟ್ಟಿಯಲ್ಲಿ ಒಳಪಡಿಸಬೇಕು ಮುಂತಾದ ಠರಾವು ಮಂಡಿಸಲಾಯಿತು.