ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ 13ನೇ ಸಂಸ್ಮರಣಾ ಕಾರ್ಯಕ್ರಮ ಬದಿಯಡ್ಕಮಂಡಲ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಜರಗಿತು.
ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಪುಷ್ಪಾರ್ಚನೆಗೈದು ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಕಾಂಗ್ರೆಸ್ ನೇತಾರ ಪಿ.ಜಿ. ಚಂದ್ರಹಾಸ.ರೈ, ನಾರಾಯಣ ಎಂ., ಖಾದರ್ ಮಾನ್ಯ, ಕೃಷ್ಣದಾಸ್ ದರ್ಬೆತಡ್ಕ, ಕೇಶವ ಬದಿಯಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಕುಮಾರ್ ಭಟ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಸುಂದರ, ರಾಮಕೃಷ್ಣನ್, ವಿಲ್ಸನ್ ಕ್ರಾಸ್ತಾ ವಿದ್ಯಾಗಿರಿ, ರಾಜನ್ ಮಾನ್ಯ ಮೊದಲಾದವರು ಮಾತನಾಡಿದರು.ಕಾರ್ಯಕರ್ತರು ಉಪಸ್ಥಿತರಿದ್ದರು. ಮಂಡಲ ಉಪಾಧ್ಯಕ್ಷ ಪಿ.ಜಿ. ಜಗನ್ನಾಥ ರೈ ಸ್ವಾಗತಿಸಿ, ಶಾಫಿ ಗೋಳಿಯಡಿ ವಂದಿಸಿದರು.