ತಿರುವನಂತಪುರ: ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಕೆಲವು ಕೆಲಸಗಳನ್ನು ಮಾಡುವ ಹಕ್ಕು ರಾಜ್ಯಪಾಲರಿಗೆ ಇದೆ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
ಕಾನೂನು ಬದಲಾವಣೆಯಾಗುವವರೆಗೆ ರಾಜ್ಯಪಾಲರಿಗೆ ಅಧಿಕಾರ ಚಲಾಯಿಸುವ ಹಕ್ಕಿದೆ ಎಂದರು. ಪೋಲೀಸರು ಯಾವುದೇ ರಾಜಕೀಯ ಪಕ್ಷದ ಏಜೆಂಟ್ ರಂತೆ ವರ್ತಿಸುವುದು ಕೂಡದು ಎಂದು ಶಶಿ ತರೂರ್ ಟೀಕಿಸಿದ್ದಾರೆ.
“ವಿಶ್ವವಿದ್ಯಾಲಯದ ಕುಲಪತಿಯಾಗಿ ರಾಜ್ಯಪಾಲರಿಗೆ ಕೆಲವು ಕೆಲಸಗಳನ್ನು ಮಾಡುವ ಹಕ್ಕಿದೆ. ಎಸ್‍ಎಫ್‍ಐಗೆ ಇಷ್ಟವಿಲ್ಲದಿದ್ದರೆ ಅದು ಎಸ್‍ಎಫ್‍ಐ ಮತ್ತು ರಾಜ್ಯಪಾಲರ ನಡುವಿನ ವಿಷಯವಾಗಿದೆ. ಕಾನೂನು ಬದಲಾವಣೆಯಾಗುವವರೆಗೆ ಅದನ್ನು ಬಳಸಿಕೊಳ್ಳುವ ಹಕ್ಕು ರಾಜ್ಯಪಾಲರಿಗೂ ಇದೆ. ಎಲ್ಲರನ್ನೂ ನೋಡಿಕೊಳ್ಳುವುದು ಪೋಲೀಸರ ಕೆಲಸ. ಆದರೆ ಯಾವುದೇ ರಾಜಕೀಯ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಂದಿರುವರು.
ಮುಖ್ಯಮಂತ್ರಿ ವಿರುದ್ಧ ಕಪ್ಪು ಬಾವುಟ ತೋರಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವೇ?.. ಕಲ್ಲು ತೂರಲಿಲ್ಲ. ಮೌನವಾಗಿ ಕಪ್ಪು ಬಾವುಟ ತೋರಿಸುತ್ತಿರುವುದನ್ನು ಹತ್ತಿಕ್ಕಲು ಪೋಲೀಸರಿಗೆ ಯಾವ ಹಕ್ಕಿದೆ. ನನ್ನ ವಿರುದ್ಧವೂ ಕಪ್ಪು ಬಾವುಟ ಪ್ರತಿಭಟನೆಗಳು ನಡೆದಿವೆ. ಅದು ಅವರ ಹಕ್ಕು ಎಂಬುದನ್ನು ನಾನು ಒಪ್ಪುತ್ತೇನೆ.'ಎಂದು ಶಶಿ ತರೂರ್ ಹೇಳಿದರು.