ಮುಳ್ಳೇರಿಯ: ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರದಿಂದ ಜಿಲ್ಲಾ ಶಾಲಾ ಕಲೋತ್ಸವ ಮಂಗಳವಾರ ಆರಂಭಗೊಂಡಿತು. ಇದರ ಅಂಗವಾಗಿ ಸೋಮವಾರ ಪ್ರಚಾರ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದ ಬಳಿಯಿಂದ ಆರಂಭವಾದ ಮೆರವಣಿಗೆ ಸಹಕಾರಿ ಆಸ್ಪತ್ರೆ ಬಳಿ ಸಮಾಪನಗೊಂಡಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಕಾರಡ್ಕ ಪಂಚಾಯಿತಿ ಅಧ್ಯಕ್ಷ ಎಂ.ಗೋಪಾಲಕೃಷ್ಣ, ಉಪಾಧ್ಯಕ್ಷ ಎಂ. ಜನನಿ, ಕಾರಡ್ಕÀ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ನಾಸರ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ರತ್ನಾಕರ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ನಂದಿಕೇಶನ್, ಪಂಚಾಯತಿ ಸದಸ್ಯರಾದ ಎಂ ತಂಬಾನ್, ರೂಪಾ ಸತ್ಯನ್, ಎ ಪ್ರಸೀಜ, , ಎ ಕೆ ಅಬ್ದುಲ್ ರಹಿಮಾನ್ ಹಾಜಿ, ಪ್ರಾಂಶುಪಾಲೆ ಮೀರಾ ಜೋಸ್, ಮುಖ್ಯ ಶಿಕ್ಷಕ ಎಂ ಸಂಜೀವ, ಪಿಟಿಎ ಅಧ್ಯಕ್ಷ ಕೆ ಸುರೇಶ್ ಕುಮಾರ್, ಎಸ್ ಎಂಎಸಿ ಅಧ್ಯಕ್ಷ ಸುರೇಶ್ ಮುದಂಕುಳ, ಮದರ್ ಪಿಟಿಎ ಅಧ್ಯಕ್ಷೆ ಗೀತಾ ತಂಬಾನ್, ಕೆ ಶಂಕರನ್, ಎ. ವಿಜಯಕುಮಾರ್, ಎಂ ಕೃಷ್ಣನ್, ವಾರಿಜಾಕ್ಷನ್, ವಿನೋದನ್ ನಂಬಿಯಾರ್, ಮಾಧ್ಯಮ ಸಮಿತಿ ಅಧ್ಯಕ್ಷ ಶಿಹಾಬುದ್ಧೀನ್, ರಾಜೇಶ್ ಕುಮಾರ್, ರಜಿತ್ ಕಾರಡ್ಕ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
. ಮಂಗಳವಾರ ಬೆಳಗ್ಗೆ 9ಕ್ಕೆ ಜಿಲ್ಲಾ ಶಿಕ್ಷಣ ಉಪ ನಿದೇಸಕ ಕೆ. ನಂದಿಕೇಶನ್ ಧ್ವಜಾರೋಹಣ ನಡೆಸಿದರು. ಡಿ. 7ರಂದು ಸಂಜೆ 4ಕ್ಕೆ ಕೇರಳ ವಿಧಾನ ಸಭಾ ಸ್ಪೀಕರ್ ಎ.ಎನ್ ಶಂಸೀರ್ ಕಲೋತ್ಸವ ಉದ್ಘಾಟಿಸುವರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲೆಯ ಶಾಸಕರು, ಸ್ಥಳೀಯಾಡಳಿತ ಜನಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸುವರು.
ಡಿ. 6ರ ವರೆಗೆ ಏಳು ವದಿಕೆಗಳಲ್ಲಾಗಿ ವೇದಿಕೇತರ ಸ್ಪರ್ಧೆಗಳು ನಡೆಯುವುದು. ಒಟ್ಟು 305 ವಿಭಾಗಗಳಲ್ಲಾಗಿ ಯುವ ಪ್ರತಿಭೆಗಳಿಂದ ಪ್ರದರ್ಶನ ನಡೆಯಲಿದೆ. ರಾಜ್ಯದ ಕೈಪಿಡಿಯಲ್ಲಿ ಸೇರಿಸದ ಎಂಟು ಕನ್ನಡ ವಿಭಾಗಗಳು ಒಳಗೊಂಡಿದೆ. ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಎಚ್‍ಎಸ್‍ಎಸ್ ವಿಭಾಗದಲ್ಲಿ 4112 ಪ್ರತಿಭೆಗಳು ಸ್ಪರ್ಧಿಸಲಿದ್ದಾರೆ.
ಸ್ಪರ್ಧೆಯು ಒಟ್ಟು 83 ವೇದಿಕೇತರ ಮತ್ತು 222 ವೇದಿಕೆ ಸ್ಪರ್ಧೆಗಳು ಒಳಗೊಂಡಿದೆ. ಉಪಜಿಲ್ಲೆಯಿಂದ 92 ಅಪೀಲು ಲಭಿಸಿದ್ದು, ಅನುಮೋದನೆ ಪಡೆದ ಎಲ್ಲ 301 ಮಕ್ಕಳು ಸ್ಪರ್ಧಿಸಲಿದ್ದಾರೆ.