ತಿರುವನಂತಪುರಂ: ಸುದ್ದಿ ವರದಿ ಮಾಡಿದ್ದಕ್ಕಾಗಿ ಮಾಧ್ಯಮದ ಕಾರ್ಯಕರ್ತರ ವಿರುದ್ಧ ಪೋಲೀಸರ ಕ್ರಮವನ್ನು ಖಂಡಿಸಿ ಕೇರಳ ಪತ್ರಕರ್ತರ ಸಂಘ(ಕೆ.ಯು.ಡಬ್ಲ್ಯು ಜೆ) ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ಡಿಜಿಪಿ ಅಧಿಕೃತ ನಿವಾಸದಲ್ಲಿ ಮಹಿಳಾ ಮೋರ್ಚಾ ಪ್ರತಿಭಟನೆ ವರದಿ ಮಾಡಿದ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜನ್ಮಭೂಮಿ ಛಾಯಾಗ್ರಾಹಕ ಅನಿಲ್ ಗೋಪಿ, ಜನಂ ಟಿವಿ ವರದಿಗಾರ್ತಿ ರಶ್ಮಿ ಕಾರ್ತಿಕಾ ಮತ್ತು ಕ್ಯಾಮರಾಮನ್ ನಿತಿನ್ ಎಬಿ ಅವರಿಗೆ ಮ್ಯೂಸಿಯಂ ಪೋಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸಂಚು, ಅತಿಕ್ರಮ ಪ್ರವೇಶ, ಸಭೆ, ಗಲಭೆ ಯತ್ನ ಮತ್ತು ಪೆÇಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಡಿಜಿಪಿ ಮನೆ ವರಾಂಡದಲ್ಲಿ ಕುಳಿತು ಘೋಷಣೆ ಕೂಗಿದ ಅವಮಾನ ಮುಚ್ಚಿಕೊಳ್ಳಲು ಘಟನೆ ವರದಿ ಮಾಡಿದ ಮಾಧ್ಯಮ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ ಮತ್ತು ಅಧಿಕಾರ ದುರುಪಯೋಗವಾಗಿದೆ.
ಪ್ರಕರಣವನ್ನು ಹಿಂಪಡೆದು ತಪ್ಪನ್ನು ಸರಿಪಡಿಸಲು ಕೇರಳ ಪೆÇಲೀಸರು ಸಿದ್ಧರಾಗಿರಬೇಕು ಮತ್ತು ನ್ಯಾಯಾಲಯವು ರದ್ದುಗೊಳಿಸಿದ್ದರೂ ಅದೇ ಲೋಪವನ್ನು ಪುನರಾವರ್ತಿಸುವ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷೆ ಎಂ.ವಿ.ವಿನೀತಾ, ಪ್ರಧಾನ ಕಾರ್ಯದರ್ಶಿ ಆರ್.ಕಿರಣ್ ಬಾಬು ಆಗ್ರಹಿಸಿದರು.