ಹಮಿರಾಪುರ: ಕೇಂದ್ರ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮಿರಾಪುರ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 'ನಮೋ ಟೀ ಸ್ಟಾಲ್'ಗಳನ್ನು ಸ್ಥಾಪಿಸಲಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ವಕ್ತಾರರೊಬ್ಬರು ತಿಳಿಸಿದ್ದಾರೆ.
'ಟೀ ಸ್ಟಾಲ್‌ಗಳಿಗೆ 'ಪ್ರಸಕ್ತ ಭಾರತದ ವಾಸ್ತುಶಿಲ್ಪಿ' ನರೇಂದ್ರ ಮೋದಿ ಅವರ ಹೆಸರಿಟ್ಟಿದ್ದು, ಹಮಿರಾಪುರದ ಗಾಂಧಿ ಚೌಕ್, ನಾದೌನ್‌ನ ಇಂದ್ರಪಾಲ್ ಚೌಕ್, ಬದ್ಸರ್ ಬಜಾರ್ ಮತ್ತು ಸುಜಾನ್‌ಪುರದ ಪ್ರಮುಖ ಮಾರುಕಟ್ಟೆಗಳಲ್ಲಿ ಟೀ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ' ಎಂದು ಅವರು ಹೇಳಿದರು.
''ಟೀ ಮತ್ತು ಚರ್ಚೆ' ಎಂಬ ಆಶಯದೊಂದಿಗೆ ಟೀ ಸ್ಟಾಲ್‌ಗಳನ್ನು ಸ್ಥಾಪಿಸಲಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ದಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ' ಎಂದರು.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ 'ಚಾಯ್ ಪೇ ಚರ್ಚಾ' ಎಂಬ ಕಾರ್ಯಕ್ರಮವನ್ನು ಬಿಜೆಪಿ ಪ್ರಾರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ದೇಶದ ನೂರಾರು ಸ್ಥಳಗಳಿಗೆ ತೆರಳಿ ಜನರೊಂದಿಗೆ ಚಹಾ ಸೇವಿಸಿ ಚರ್ಚೆ ನಡೆಸಿದ್ದರು.