ಕುಂಬಳೆ: ಚೇವಾರು ಶ್ರೀ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ವಿದ್ಯಾರ್ಥಿಗಳ ಸಪ್ತ ದಿನ ಶಿಬಿರವನ್ನು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ. ಉದ್ಘಾಟಿಸಿದರು.
ಧರ್ಮತ್ತಡ್ಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕೆ. ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ಪಂಚಾಯತಿ ಸದಸ್ಯೆ ರಾಜೀವಿ, ಚೇವಾರು ಶಾಲಾ ವ್ಯವಸ್ಥಾಪಕ ಪ್ರತಿನಿಧಿ ಶ್ರೀಧರ ಭಟ್, ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಎನ್, ಚೇವಾರು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜಗದೀಶ್, ಚೇವಾರು ಶಾಲಾ ಮುಖ್ಯ ಶಿಕ್ಷಕರಾದ ಶ್ಯಾಮ್ ಭಟ್ ಯು, ಧರ್ಮತ್ತಡ್ಕ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಇ.ಎಚ್.ಗೋವಿಂದ ಭಟ್. ಎನ್‍ಎಸ್‍ಎಸ್ ಕಾಸರಗೋಡು ವಿಭಾಗದ ಸಂಯೋಜಕ ಹರಿದಾಸ್, ಶ್ರೀನಾಥ್ ಹಾಗು ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ ಶುಭಹಾರೈಸಿದರು. ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಮಚಂದ್ರ ಭಟ್ ಎನ್. ಸ್ವಾಗತಿಸಿ, ಉಪನ್ಯಾಸಕ ಜಗದೀಶನ್ ಪಿ.ವಿ. ವಂದಿಸಿದರು. ಉಪನ್ಯಾಸಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.