HEALTH TIPS

ಹಠಾತ್‌ ಸಾವು, ಮಹಿಳೆಯರು, ಮಕ್ಕಳ ವಿರುದ್ಧ ಅಪರಾಧ ಪ್ರಕರಣಗಳಲ್ಲಿ ಏರಿಕೆ: ಎನ್‌ಸಿಆರ್‌ಬಿ ವರದಿ

               ನ್ಯಾಷನಲ್‌ ಕ್ರೈಂ ರೆಕಾರ್ಡ್ಸ್‌ ಬ್ಯೂರೋ ತನ್ನ ವಾರ್ಷಿಕ ಅಪರಾಧ ವರದಿ ಮತ್ತು ಆಕಸ್ಮಿಕ ಸಾವುಗಳು ಮತ್ತು ಆತ್ಮಹತ್ಯೆಗಳ ಕುರಿತ ವರದಿಯನ್ನು ರವಿವಾರ ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ದೇಶದಲ್ಲಿ ಒಟ್ಟಾರೆ ಅಪರಾಧ ಪ್ರಮಾಣ ಇಳಿಕೆಯಾಗಿದೆ.

             2021ರಲ್ಲಿ ಅಪರಾಧ ಪ್ರಮಾಣಗಳು ಶೇ 7ರಷ್ಟು ಇಳಿಕೆಯಾಗಿದ್ದರೆ ಈ ಬಾರಿ ಶೇ6.9ರಷ್ಟು ಇಳಿಕೆಯಾಗಿದೆ. ಆದರೆ ದೇಶದಲ್ಲಿ ಹಠಾತ್‌ ಸಾವುಗಳ ಸಂಖ್ಯೆಯಲ್ಲಿ ಶೇ 11.6ರಷ್ಟು ಏರಿಕೆಯಾಗಿದೆ ಹಾಗೂ ಮಹಿಳೆಯರು, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ಮತ್ತು ಆತ್ಮಹತ್ಯೆಗಳಲ್ಲಿ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.

             ದೇಶದಲ್ಲಿ 2022ರಲ್ಲಿ ಕನಿಷ್ಠ 56,653 ಹಠಾತ್‌ ಸಾವು ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 32,410 ಹೃದಯಾಘಾತ ಪ್ರಕರಣಗಳಾಗಿದ್ದರೆ ಉಳಿದ 24,243 ಸಾವುಗಳಿಗೆ ಬೇರೆ ಕಾರಣ ನೀಡಲಾಗಿದೆ. 45-60 ವಯೋಮಾನದವರಲ್ಲಿ ಗರಿಷ್ಠ ಸಾವು (19,456) ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ಆತ್ಮಹತ್ಯೆಗಳ ಸಂಖ್ಯೆ 1,70,924 ಆಗಿದ್ದರೆ 2021ರಲ್ಲಿ ಈ ಸಂಖ್ಯೆ 1,64,033 ಆಗಿತ್ತು.

              ಅಪಘಾತಗಳಿಂದ ಉಂಟಾದ ಸಾವುಗಳ ಪ್ರಮಾಣ 2022ರಲ್ಲಿ 4,30,504 ಆಗಿದ್ದರೆ 2021ರಲ್ಲಿ ಈ ಸಂಖ್ಯೆ 3,97,530 ಆಗಿತ್ತು.

               2022ರಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆ 4,45,256 ಆಗಿದೆ, 2021ಗೆ ಹೋಲಿಸಿದಾಗ ಇದು ಶೇ4ರಷ್ಟು ಹೆಚ್ಚಾಗಿದೆ. ಹೆಚ್ಚಿನ ಪ್ರಕರಣಗಳು ಗಂಡ ಹಾಗೂ ಆತನ ಮನೆಯವರ ಕಿರುಕುಳ, ಮಹಿಳೆಯರ ಅಪಹರಣ ಹಾಗೂ ಅವರ ಮೇಲೆ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣಗಳಾಗಿವೆ.ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆ 2022ರಲ್ಲಿ 1,62,449 ಆಗಿದ್ದರೆ 2021ಗೆ ಹೋಲಿಸಿದಾಗ ಇದು ಶೇ8.7ರಷ್ಟು ಏರಿಕೆಯಾಗಿದೆ.

                60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆ28,545 ಆಗಿದ್ದರೆ 2021ರಲ್ಲಿ ಈ ಸಂಖ್ಯೆ 26,110 ಆಗಿತ್ತು.

              ಪರಿಶಿಷ್ಟರ ವಿರುದ್ಧದ ಅಪರಾಧಗಳ ಸಂಖ್ಯೆ 2022ರಲ್ಲಿ 57,582 ಆಗಿದ್ದರೆ 2021 ರಲ್ಲಿ ದಾಖಲಾದ 50,900 ಪ್ರಕರಣಗಳಿಗೆ ಹೋಲಿಸಿದಾಗ ಇದು ಶೇ 13.1ರಷ್ಟು ಏರಿಕೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries