ಬದಿಯಡ್ಕ: ನೀರ್ಚಾಲು ಏಣಿಯರ್ಪು ಹನುಮಾನ್ ನಗರದಲ್ಲಿ ಸ್ವರ್ಗೀಯ ಕೆ.ಟಿ.ಜಯಕೃಷ್ಣನ್ ಮಾಸ್ತರ್ ಬಲಿದಾನ ದಿನಾಚರಣೆ ಶುಕ್ರವಾರ ಬೆಳಗ್ಗೆ ಜರಗಿತು. ಗ್ರಾ.ಪಂ ಮಾಜಿ ಸದಸ್ಯೆ ಭಾರ್ಗವಿ, ಬ್ಲಾಕ್ ಪಂ. ಮಾಜಿ ಸದಸ್ಯೆ ರತ್ನಾವತಿ ಚಿಮಿಣಿಯಡ್ಕ, ನವೀನ್ ನೀರ್ಚಾಲು, ಬಾಲಕೃಷ್ಣ ಏಣಿಯರ್ಪು, ನವೀನ ಏಣಿಯರ್ಪು, ಹರೀಶ ತೈವಳಪ್ಪು, ಸತೀಷ ಏಣಿಯರ್ಪು, ಶಶಿ ಏಣಿಯರ್ಪು ಹಾಗೂ ಕಾರ್ಯಕರ್ತರು ದಿ.ಜಯಕೃಷ್ಣನ್ ಮಾಸ್ತರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.