ತಿರುವನಂತಪುರಂ: ಕ್ರಿಸ್‍ಮಸ್ ಪ್ರಯುಕ್ತ ಕೇರಳಕ್ಕೆ ವಿಶೇಷ ವಂದೇ ಭಾರತ್ ರೈಲು ಇಂದಿನಿಂದ ಆರಂಭಗೊಳ್ಳಲಿದೆ. ಚೆನ್ನೈನಿಂದ ಕೋಝಿಕ್ಕೋಡ್‍ಗೆ ವಿಶೇಷ ವಂದೇ ಭಾರತ್ ಸೇವೆ ಚಾಲನೆಗೊಳ್ಳಲಿದೆ.
ಪ್ರಯಾಣಿಕರ ನೂಕುನುಗ್ಗಲು ಗಮನದಲ್ಲಿಟ್ಟುಕೊಂಡು ರೈಲ್ವೇ ಈ ನಿರ್ಧಾರ ತೆಗೆದುಕೊಳ್ಳುತ್ತಿದೆ.ರೈಲು ಚೆನ್ನೈನಿಂದ ಬೆಳಗ್ಗೆ 4.30ಕ್ಕೆ ಹೊರಡಲಿದೆ.
ಮಧ್ಯಾಹ್ನ 3.30ಕ್ಕೆ ಕೋಝಿಕ್ಕೋಡ್ ತಲುಪಲಿದೆ. ವಿಶೇಷ ವಂದೇಭಾರತಕ್ಕೆ ಪಾಲಕ್ಕಾಡ್, ಶೋರ್ನೂರ್ ಮತ್ತು ತಿರೂರ್‍ನಲ್ಲಿ ನಿಲುಗಡೆ ಇರುತ್ತದೆ.