ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಚುನಾವಣೆ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಯಿತು. ವಿದ್ಯಾರ್ಥಿಗಳೇ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಪ್ರತಿ ತರಗತಿಯಿಂದ ಜಯಗಳಿಸಿದ ನಾಯಕರು ಸಭೆ ಸೇರಿ ಶಾಲಾ ನಾಯಕನನ್ನು ಆಯ್ಕೆ ಮಾಡಿದರು 9ನೇ ತರಗತಿಯ ಜೀವನ್ ಕುಮಾರ್ ಶಾಲಾ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಯಿತು. 10ನೇ ತರಗತಿಯ ಸಾಧಿಕ ಉಪನಾಯಕಿಯಾಗಿ ಆಯ್ಕೆಯಾದರು. ಸಮಾಜ ವಿಜ್ಞಾನ ಕ್ಲಬ್‍ನ ರಾಧಾಕೃಷ್ಣ ಎಂ, ಅಶ್ವತಿ ಪಾರ್ಲಿಮೆಂಟ್ ರೂಪೀಕರಣದ ಬಗ್ಗೆ ಮಾಹಿತಿ ನೀಡಿದರು. ಶಾಲಾ ನೌಕರರ ಸಂಘದ ಕಾರ್ಯದರ್ಶಿ ಕಿರಣ್ ಕೆ ಉಪಸ್ಥಿತರಿದ್ದರು.