ತಿರುವನಂತಪುರಂ: ಪಾಲಕ್ಕಾಡ್ ಕಾಂಗ್ರೆಸ್ ನಾಯಕ ಎ.ವಿ. ಗೋಪಿನಾಥ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸಿ ನವಕೇರಳ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕೆ ಕೆಪಿಸಿಸಿ ಈ ಶಿಸ್ತು ಕ್ರಮ ಕೈಗೊಂಡಿದೆ.
ಸಿಪಿಎಂ ಜಿಲ್ಲಾ ಕಾರ್ಯದರ್ಶಿಯವರೊಂದಿಗೆ ಪಾಲಕ್ಕಾಡ್ ನಲ್ಲಿ ನಡೆದ ನವಕೇರಳ ಸಮಾವೇಶದ ಬೆಳಗಿನ ಸಭೆಗೆ ಎ.ವಿ. ಗೋಪಿನಾಥ್ ಆಗಮಿಸಿದ್ದರು. ಆದರೆ ನಾನು ಇನ್ನೂ ಕಾಂಗ್ರೆಸ್ಸಿಗನಾಗಿದ್ದೇನೆ ಎಂದು ಹೇಳಿರುವÀರು.ಮುಖ್ಯಮಂತ್ರಿಗಳ ಅಭಿವೃದ್ಧಿ ವಿಷಯಗಳಿಗೆ ಬೆಂಬಲ ನೀಡುತ್ತೇನೆ ಮತ್ತು ಸಂಸತ್ತಿನ ಚುನಾವಣೆಯ ಸಮಯದಲ್ಲಿ ತಮ್ಮ ರಾಜಕೀಯ ನಿಲುವು ತಿಳಿಸುತ್ತೇನೆ ಎಂದು ಗೋಪಿನಾಥ್ ಸ್ಪಷ್ಟಪಡಿಸಿದರು.
ನವ ಕೇರಳ ಸಮಾವೇಶಕ್ಕೆ ಸಹಕಾರ ನೀಡದಂತೆ ಕಾಂಗ್ರೆಸ್ ಮುಖಂಡರು ಹಾಗೂ ಜನಪ್ರತಿನಿಧಿಗಳಿಗೆ ಕೆಪಿಸಿಸಿ ಸೂಚಿಸಿತ್ತು. ಭಾಗವಹಿಸಿದ ಮುಖಂಡರ ವಿರುದ್ಧವೂ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿತ್ತು.