ಪತ್ತನಂತಿಟ್ಟ: ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗೆ ಪೋಲೀಸರು ಥಳಿಸಿದ ಘಟನೆ ನಡೆದಿದೆ. ಚಿರೈನ್‍ಕೀಜ್ ವ್ಯಾಪ್ತಿಯ ಮುದಾಪುರದಿಂದ ಶಬರಿಮಲೆಗೆ ತೆರಳಿದ್ದ ಕಣ್ಣನ್ ಎಂಬವರಿಗೆ ಪೆÇಲೀಸರು ಥಳಿಸಿದ್ದಾರೆ.
ನೂಕು ನುಗ್ಗಲಿನಲ್ಲಿ ಇರುಮುಡಿಕಟ್ಟು ಕಳೆದುಹೋಗಿದೆ ಎಂದು ಪೆÇಲೀಸರಿಗೆ ಹೇಳಲು ಹೋದಾಗ ಭಕ್ತನಿಗೆ ಪೆÇಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಲಾಠಿಯಿಂದ ಹೊಡೆತದಿಂದ ಕಾಲಿಗೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿದೆ ಎಂದು ಯುವಕ ಹೇಳಿದ್ದಾನೆ. ನಡೆಯಲು ಕಷ್ಟ ಪಡುತ್ತಿದ್ದ ಯುವಕನನ್ನು ಜೊತೆಯಲ್ಲಿದ್ದ ಇತರ ಅಯ್ಯಪ್ಪ ಭಕ್ತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸನ್ನಿಧಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಪೆÇಲೀಸರ ಲಾಠಿ ಏಟು ತಿಂದ ಯುವಕ ದರ್ಶನ ಪಡೆಯದೇ ಪಂಬಾಗೆ ವಾಪಸಾಗಿದ್ದಾನೆ. ಯುವಕ ಮನೆಗೆ ಮರಳಿದ್ದು, ಕಾಲಿಗೆ ಗಾಯವಾಗಿ ಈಗ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.