ಕಾಸರಗೋಡು: ಹೊಸ ವರ್ಷವನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಬೇಕಲದಲ್ಲಿ ಸರ್ವಸಿದ್ಧತೆ ಭರದಿಂದ ಸಾಗುತ್ತಿದೆ. ಅಂತಾರಾಷ್ಟ್ರೀಯ ಬೇಕಲ್ ಫೆಸ್ಟ್‍ನ ಕೊನೆಯ ದಿನವಾಗಿರುವ ಡಿ. 31ರ ರಾತ್ರಿ ಬೇಕಲ ಪರಿಸರ ವಿದ್ಯುದ್ದೀಪ ಹಾಗೂ ಸುಡುಮದ್ದುಗಳಿಂದ ವರ್ಣರಂಜಿತವಾಗಲಿದೆ.
ಹೊಸವರ್ಷವನ್ನು ಸವಗತಿಸುವ ಸಮಾರಂಭಕ್ಕೆ ಕೇರಳ ಕುಟುಂಬಶ್ರೀ ಕೈಜೋಡಿಸಲಿದೆ. ಹೊಸ ವರ್ಷದ ಸ್ವಾಗತಕ್ಕಾಗಿ ಒಂದು ಲಕ್ಷಕ್ಕೂ ಮಿಕ್ಕಿ ಕುಟುಂಬಶ್ರೀ ಕಾರ್ಯಕರ್ತರು ಬೇಕಲ್ ಬೀಚ್ ಪಾರ್ಕ್‍ನಲ್ಲಿ ಬಂದು ಸೇರಲಿದ್ದಾರೆ. ಸಂಜೆ 4 ರಿಂದ 12 ರವರೆಗೆ ಹೊಸ ವರ್ಷಾಚರಣೆಯ ವಿವಿಧ ಕಾರ್ಯಕ್ರಮ ನಡೆಯಲಿದೆ. ಕಾರಡ್ಕ, ಮಂಜೇಶ್ವರಂ ಮತ್ತು ಪರಪ್ಪ ಬ್ಲಾಕ್‍ಗಳು ನೀಲೇಶ್ವರಂ, ಕಾಸರಗೋಡು ಮತ್ತು ಕಾಞಂಗಾಡ್ ಬ್ಲಾಕ್‍ಗಳ ಕುಟುಂಬಶ್ರೀ ಸದಸ್ಯರು ಹೊಸ ವರ್ಷವನ್ನು ಸ್ವಾಗತಿಸಲು ಬೇಕಲದ ಕರಾವಳಿಯಲ್ಲಿ ಒಟ್ಟುಸೇರಲಿದ್ದಾರೆ.