ಮಂಜೇಶ್ವರ: ಜಿಲ್ಲೆಯ ಸಾಂಪ್ರದಾಯಿಕ ಪ್ರಾಚೀನ ಕಂಬಳವೆಂದೇ ಪ್ರಸಿದ್ದವಾಗಿರುವ ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರಿಬೈಲು ಕಂಬಳ ಸೋಮವಾರ ವಿಜ್ರಂಭಣೆಯಿಂದ ನಡೆಯಿತು. ದೇವಸ್ಥಾನದ ಪ್ರಮುಖರಾದ ಅರಿನಾಯರು ಕಂಬಳಕೆ ಚಾಲನೆ ನೀಡಿದರು. ಹಗ್ಗವಿಭಾಗದಲ್ಲಿ ಪಾವೂರು ನೆಕ್ಕಳ ವಿಜಯಾ ಮೋನಪ್ಪ ಪೂಜಾರಿಯವರ ಕೋಣಗಳು ಪ್ರಥಮ ಬಹುಮಾನ, ತಲಪಾಡಿ ಪಂಜಾಲ ಕೀರ್ತನ್ ರವೀಂದ್ರ ಪಕಳ ದ್ವಿತೀಯ ಬಹುಮಾನ ಪಡೆದುಕೊಂಡರು. ನೇಗಿಲು ವಿಭಾಗದಲ್ಲಿ ಪಾವೂರು ಕುದುಕೋರಿ ಕುಸುಮ ಕಿಞ್ಞಣ್ಣ ಪೂಜಾರಿ ಪ್ರಥಮ ಸ್ಥಾನ ಪಡೆದರು.
ಕಂಬಳದ ಹಗ್ಗವಿಭಾಗದಲ್ಲಿ ಪಾವೂರು ನೆಕ್ಕಳ ಮುಹಮ್ಮದ್ ಹಾರಿಸ್, ಪಜಿಂಗಾರು ಕರಂಬಾರ ಬೆಟ್ಟು ಅಶೋಕ್ ಕುಮಾರ್, ಬಡಾಜೆ ಪಾಪಿಲ ಇಸುಬು ಬ್ಯಾರಿ ಎ ತಂಡ, ಬಡಾಜೆ ಪಾಪಿಲ ಇಸುಬು ಬ್ಯಾರಿ ಬಿ ತಂಡ, ಬನ್ನೂರು ಗುತ್ತು ಕಾವು ಹೇಮನಾಥ ಶೆಟ್ಟಿ, ಸೋಂಕಾಲು ತಿಂಬರ ಹಾರಿಸ್, ಪಾವೂರು ನೆಕ್ಕಳ ವೆಂಕಪ್ಪ ಗಂಗಯ್ಯ ಪೂಜಾರಿ ತಂಡಗಳೂ, ನೇಗಿಲು ವಿಭಾಗದಲ್ಲಿ ಪಟೋರಿ ಮಹಾಕಾಳಿ ಪಡ್ಪು ಪುರುμÉೂೀತ್ತಮ ಪೂಜಾರಿ, ಮುಳ್ಳೇರಿಯ ಕಾರ್ಲೆ ಪ್ರಜೀತ್ ಪದ್ಮಿನಿ ರಾವ್, ಮಂಜೇಶ್ವರ ಪಾವೂರು ನೆಕ್ಕಳ ಜವನೆರ್, ಮಂಗಳೂರು ಕೊಂಡಾಣ ಪುಳಿತ್ತಡಿ ಲಕ್ಷ್ಮಿ ವಿಠಲ ಶೆಟ್ಟಿ ತಂಡಗಳು ಭಾಗವಹಿಸಿದ್ದವು. ಗೋಪಾಲ ಶೆಟ್ಟಿ ಅರಿಬೈಲ್ ನೆತ್ಯ ಕಂಬಳ ನಿರ್ವಹಣೆ ಮಾಡಿದರು ತೀರ್ಪುಗಾರರಾಗಿ ಪಕೀರ ಮೂಲ್ಯ ಕಟ್ಟೆಮನೆ ಮತ್ತು ರಾಮ ಮೂಲ್ಯ ಸಹಕರಿಸಿದರು.
ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಕಂಬಳ ಮತ್ತು ಪೂಕರೆ ಸ್ಥಾಪನೆ ಮಾಡಿದ್ದನು ವೀಕ್ಷಿಸಿ ಪುನೀತರಾದರು.