ಕಾಸರಗೋಡು: ಕೂಡ್ಲು ಪಾಯಿಚ್ಚಾಲ್ ಋಷಿಕ್ಷೇತ್ರ ಚೈತನ್ಯ ವಿದ್ಯಾಲಯದ 2023-24ನೇ ಸಾಲಿನ ವಾರ್ಷಿಕೋತ್ಸವ ಶಾಲಾ ಸಭಾಂಗಣದಲ್ಲಿ ಜರುಗಿತು. ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಹಾಗು ಕಾಸರಗೋಡು ಸಿ.ಪಿ.ಸಿ.ಆರ್.ಐ ಕೇಂದ್ರಿಯ ವಿದ್ಯಾಲಯ(ನಂ-1)ದ ಪ್ರಾಂಶುಪಾಲ ಕೆ.ಪಿ ಸುಧಾಕರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚೈತನ್ಯ ಟ್ರಸ್ಟಿನ ಅಧ್ಯಕ್ಷ ಇ.ಎಸ್ ಮಹಾಬಲೇಶ್ವರ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿಶುವಿಹಾರದ ಮುಖ್ಯಸ್ಥೆ ರೂಪ ಕೆ.ಪಿ ಚೈತನ್ಯ ಶಿಶುವಿಹಾರದ ವಾರ್ಷಿಕ ವರದಿ ಹಾಗೂ ಪಾಂಶುಪಾಲೆ ಪುಷ್ಪಲತಾ ಎಸ್.ಯಂ ವಿದ್ಯಾಲಯದ ವಾರ್ಷಿಕ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ವಿದ್ಯಾಲಯ ಪ್ರಬಂಧಕ ನಾಗೇಶ್ ಬಿ, ಆಡಳಿತಾಧಿಕಾರಿ ರಮೇಶ ಕೆ, ಟ್ರಸ್ಟ್ ಕಾರ್ಯದರ್ಶಿ ಮೋಹನ ಯಂ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯ ಜರಗಿತು.